ತ್ಯಾಜ್ಯ ಬಿಸಾಡುವ ಸ್ಥಳವನ್ನು ಶೃಂಗರಿಸಿ ಜಾಗೃತಿ ಮೂಡಿಸಿದ ಸಾರ್ವಜನಿಕರು

Prasthutha|

ಮಡಿಕೇರಿ:ನಗರಸಭೆ ವ್ಯಾಪ್ತಿಯಲ್ಲಿ ಸಾರ್ವಜನಿಕರು ಎಲ್ಲೆಂದರಲ್ಲಿ ತ್ಯಾಜ್ಯ ಬಿಸಾಡುತ್ತಿದ್ದಾರೆ. ಇಂತಹ ಕೃತ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಡಿಕೇರಿಯ ಹಲವು ಕಡೆಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇದನ್ನು ಮೀರಿ ಸಾರ್ವಜನಿಕರು ಅಲ್ಲಲ್ಲಿ ತ್ಯಾಜ್ಯ ಬಿಸಾಡುವುದು ಸಾಮಾನ್ಯವಾಗಿದೆ.
ನಗರಸಭೆ ವತಿಯಿಂದ ಬರುವ ವಾಹನಕ್ಕೆ ತ್ಯಾಜ್ಯವನ್ನು ವಿಲೇ ಮಾಡದೆ ಅಲ್ಲಲ್ಲಿ ರಸ್ತೆ ಬದಿಗಳಲ್ಲಿ ತ್ಯಾಜ್ಯ ವಿಲೇವಾರಿ ಮಾಡುವುದು ತಪ್ಪು ಎಂದು ನಾಗರಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ನಗರಸಭೆಯ ಸಿಬ್ಬಂದಿಗಳು ಒಂದು ವಿನೂತನವಾದ ಕ್ರಮ ಕೈಗೊಂಡಿದ್ದಾರೆ.

- Advertisement -


ಅದರಂತೆ ಮುಂಜಾನೆ ಬೀದಿ ಬದಿಯಲ್ಲಿ ಸಂಗ್ರಹವಾಗಿದ್ದ ತ್ಯಾಜ್ಯವನ್ನು ನಗರಸಭೆ ಸಿಬ್ಬಂದಿಗಳು ಸ್ವಚ್ಛಗೊಳಿಸಿ ಅದೇ ಸ್ಥಳವನ್ನು ರಂಗೋಲಿ ಹಾಗೂ ಗಿಡಗಳನ್ನು ಇರಿಸುವ ಮೂಲಕ ಆ ಸ್ಥಳವನ್ನು ಶೃಂಗರ ಮಾಡಿದರು. ಈ ರೀತಿ ಶೃಂಗಾರಗೊAಡ ಸ್ಥಳದಲ್ಲಿ ಸಾರ್ವಜನಿಕರು ತ್ಯಾಜ್ಯವನ್ನು ಬಿಸಾಡುವುದಿಲ್ಲ. ಈ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ನಗರಸಭೆ ಸಿಬ್ಬಂದಿಗಳು ವಿನೂತ ಕಾರ್ಯವನ್ನು ಕೈಗೊಂಡಿದ್ದಾರೆ. ಸ್ವಚ್ಚತೆಯ ಮಹತ್ವದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಈ ಕ್ರಮ ಮುಂದಾಗಿದ್ದೇವೆ. ಸಾರ್ವಜನಿಕರು ನಗರಸಭೆಯೊಂದಿಗೆ ಕೈ ಜೋಡಿಸಿ, ನಗರವನ್ನು ಸ್ವಚ್ಛವಾಗಿರಿಸಿ ಎಂದು ನಗರಸಭೆ ಪೌರಾಯುಕ್ತರಾದ ಎಸ್.ವಿ.ರಾಮದಾಸ್ ಮನವಿ ಮಾಡಿದ್ರು

Join Whatsapp