ಜೆರುಸಲೇಂ: ಅಲ್ ಜಝೀರಾ ಸುದ್ದಿವಾಹಿನಿಯ ಕಾರ್ಯಾಚರಣೆಯನ್ನು ದೇಶದಲ್ಲಿ ಸ್ಥಗಿತಗೊಳಿಸುವುದಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.
ಅಲ್ ಜಝೀರಾ ಸುದ್ದಿವಾಹಿನಿಯನ್ನು ಸ್ಥಗಿತಗೊಳಿಸುವುದಕ್ಕೆ ಸಂಸತ್ನಲ್ಲಿ ಕಾನೂನು ಅಂಗೀಕಾರವಾದ ಬಳಿಕ ಇಸ್ರೇಲ್ ಪ್ರಧಾನಿ ಈ ಹೇಳಿಕೆ ನೀಡಿದ್ದಾರೆ.
ಅಲ್ ಜಝೀರಾ ಭಯೋತ್ಪಾದಕ ಸುದ್ದಿವಾಹಿನಿ, ಅದು ಜನರನ್ನು ಪ್ರಚೋದಿಸುವ ಕೆಲಸವನ್ನು ಮಾಡುತ್ತಿದೆ ಎಂದು ನೆತನ್ಯಾಹು ಆರೋಪಿಸಿದ್ದಾರೆ.
ಇಸ್ರೇಲ್ ಹೇಳಿಕೆಯನ್ನು ಅಲ್ ಜಝೀರಾ ತೀವ್ರವಾಗಿ ಖಂಡಿಸಿದೆ. ನಮ್ಮ ವಿರುದ್ಧ ಇಸ್ರೇಲ್ ಪ್ರಧಾನಿ ಮಾಡಿರುವ ಪ್ರಚೋದನಕಾರಿ ಆರೋಪ ಅಪಾಯಕಾರಿ, ಹಾಸ್ಯಾಸ್ಪದ ಹಾಗೂ ಸುಳ್ಳು ಎಂದು ಅದು ಪ್ರತಿಕ್ರಿಯಿಸಿದೆ.
ನಮ್ಮ ಸುದ್ದಿವಾಹಿನಿ ವೃತ್ತಿಪರವಾಗಿ ವರದಿಗಳನ್ನು ಪ್ರಸಾರ ಮಾಡುವುದನ್ನು ಮುಂದುವರಿಸುತ್ತದೆ. ಹೀಗಾಗಿ, ನಮ್ಮ ಸಿಬ್ಬಂದಿ ಮತ್ತು ಕಚೇರಿಗಳ ಸುರಕ್ಷತೆಗೆ ಬೆಂಜಮಿನ್ ಅವರೇ ಜವಾಬ್ದಾರರಾಗಿರುತ್ತಾರೆ ಎಂದೂ ಅಲ್ ಜಝೀರಾ ಸುದ್ದಿವಾಹಿನಿ ತಿಳಿಸಿದೆ