Home ಟಾಪ್ ಸುದ್ದಿಗಳು ಹಾಲು, ಮೊಸರಿನ ಬೆಲೆ 2 ರೂ. ಏರಿಕೆ

ಹಾಲು, ಮೊಸರಿನ ಬೆಲೆ 2 ರೂ. ಏರಿಕೆ

ಬೆಂಗಳೂರು: ಒಂದು ಲೀಟರ್ ಹಾಲು ಹಾಗೂ ಮೊಸರಿಗೆ ತಲಾ 2 ರೂಪಾಯಿ ಹೆಚ್ಚಿಸಿ ಕೆಎಂಎಫ್ ಆದೇಶ ಹೊರಡಿಸಿದೆ.


ನಾಳೆಯಿಂದ ನಂದಿನಿ ಹಾಲು ಮತ್ತು ಮೊಸರಿನ ದರ ಏರಿಕೆಯಾಗಲಿದ್ದು, ಆಡಳಿತ ಮಂಡಳಿಯ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.


ನಂದಿನಿ ಹಾಲು ಮತ್ತು ಮೊಸರಿಗೆ ಎರಡು ರೂಪಾಯಿ ಹೆಚ್ಚಿಸಲಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಮಧ್ಯೆ ಹಾಲು, ಮೊಸರು ದರ ಏರಿಕೆ ಮಾಡಿರುವುದು ಶ್ರೀಸಾಮಾನ್ಯನ ಗಾಯದ ಮೇಲೆ ಬರೆ ಎಳೆದಂತಾಗಿದೆ.

Join Whatsapp
Exit mobile version