Home ಟಾಪ್ ಸುದ್ದಿಗಳು ಗಗನಕ್ಕೇರಿದ ಕುಚ್ಚಲಕ್ಕಿ ಬೆಲೆ: ಕಂಗಾಲಾದ ಕರಾವಳಿಯ ಜನತೆ

ಗಗನಕ್ಕೇರಿದ ಕುಚ್ಚಲಕ್ಕಿ ಬೆಲೆ: ಕಂಗಾಲಾದ ಕರಾವಳಿಯ ಜನತೆ

ಮಂಗಳೂರು: ಕರಾವಳಿ ಪ್ರದೇಶದ ಜನರ ಪ್ರಮುಖ ಆಹಾರವಾದ ಕುಚ್ಚಲಕ್ಕಿ ದರ ಬಾರಿ ಏರಿಕೆ ಕಂಡಿದ್ದು, ಜನಸಾಮಾನ್ಯರು ತತ್ತರಿಸಿದ್ದಾರೆ. ಕೆ.ಜಿ.ಗೆ 15ರಿಂದ 20 ರೂ. ಹೆಚ್ಚಳವಾಗಿ 48 ರಿಂದ 50 ರೂ. ನಲ್ಲಿ ಮಾರಾಟವಾಗುತ್ತಿರುವ ಹಿನ್ನಲೆಯಲ್ಲಿ ಕರಾವಳಿಯ ಜನತೆ ಕಂಗಾಲಾಗಿದ್ದಾರೆ.


2022ರ ಡಿಸೆಂಬರ್ ನಲ್ಲಿ ಒಂದು ಕ್ವಿಂಟಾಲ್ ಕುಚ್ಚಲಕ್ಕಿ ದರ 3200 ರೂ.ನಿಂದ 3300 ರೂ.ವರೆಗೆ ಇತ್ತು. 2023ರ ಮಾರ್ಚ್ -ಏಪ್ರಿಲ್ ನಲ್ಲಿ ಭಾರಿ ಏರಿಕೆ ಖಂಡ ಕುಚಲಕ್ಕಿ ದರ ಕ್ವಿಂಟಾಲ್ ಗೆ 4,200 ರೂ.ವರೆಗೂ ತಲುಪಿತ್ತು.

ಕುಚ್ಚಲಕ್ಕಿ ಬೆಲೆಯಲ್ಲಿ ಭಾರೀ ಹೆಚ್ಚಳವಾದರೂ, ಭತ್ತದ ಬೆಲೆ ಕೆ.ಜಿ.ಗೆ 2-3 ರೂ. ಮಾತ್ರ ಏರಿಕೆಯಾಗಿದೆ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ. ಕರಾವಳಿ ಸೇರಿದಂತೆ ಮಲೆನಾಡು, ಬಯಲುಸೀಮೆ ಭಾಗದಲ್ಲೂ ಕಾರ್ಮಿಕರ ಕೊರತೆ, ಬೆಲೆಯ ಅಸ್ಥಿರತೆ ಇತ್ಯಾದಿ ಕಾರಣಕ್ಕೆ ಭತ್ತದ ಬೇಸಾಯ ಕುಸಿತ ಕಂಡಿದ್ದು, ಇದರಿಂದಾಗಿ ಕುಚ್ಚಲಕ್ಕಿ ಬೆಲೆ ಏರಿಕೆಯಾಗಿದೆ.

Join Whatsapp
Exit mobile version