Home ಟಾಪ್ ಸುದ್ದಿಗಳು ಮುಂದಿನ ಚುನಾವಣೆಯಲ್ಲಿ ಮಠಾಧೀಶರು ಅಖಾಡಕ್ಕೆ: ರುದ್ರಮುನಿ ಸ್ವಾಮೀಜಿ

ಮುಂದಿನ ಚುನಾವಣೆಯಲ್ಲಿ ಮಠಾಧೀಶರು ಅಖಾಡಕ್ಕೆ: ರುದ್ರಮುನಿ ಸ್ವಾಮೀಜಿ

ಹುಬ್ಬಳ್ಳಿ: ಬೇಡ ಜಂಗಮ ಸಮುದಾಯಕ್ಕೆ ಸಂವಿಧಾನ ಬದ್ಧವಾಗಿ ದೊರೆಯಬೇಕಾದ ಮೀಸಲಾತಿ ಸೌಲಭ್ಯ ಸರಕಾರ ಕಲ್ಪಿಸಬೇಕು. ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದವರ ವಿರುದ್ಧ ದಾಖಲಾದ ಕ್ರಿಮಿನಲ್ ಮೊಕದ್ದಮೆಗಳನ್ನು ಹಿಂಪಡೆಯಬೇಕು ಎಂದು ತಿಪಟೂರು ರುದ್ರಮುನಿ ಸ್ವಾಮೀಜಿ ಆಗ್ರಹಿಸಿದ್ದಾರೆ.

ಸುದ್ದಿಗಾರರೊಂದಿಗೆ ಅವರು ಮಾತನಾಡಿದ ಅವರು, ಬೇಡ ಜಂಗಮರಿಗೆ ಮೀಸಲಾತಿ ಬೇಡ ಎನ್ನಲು, ದಿ. ಡಾ. ಎಂ.ಎಂ. ಕಲಬುರ್ಗಿ ನಮ್ಮ ಸಮಾಜದವರಲ್ಲಹೀಗಾಗಿ ಅವರು ಹಿಂದೊಮ್ಮೆ ಸಾರ್ವಜನಿಕವಾಗಿ ನೀಡಿದ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ ಎಂದು ಹೇಳಿದರು.

ಸರಕಾರ ನಮ್ಮ ನ್ಯಾಯ ಬದ್ಧವಾದ ಬೇಡಿಕೆ ಈಡೇರಿಸಬೇಕು ಹಾಗೂ ನಮಗೆ ಸಿಗಬೇಕಾದ ಸವಲತ್ತುಗಳನ್ನು ಒದಗಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಎಲ್ಲಾ ಮಠಾಧೀಶರು ಬೇಡ ಜಂಗಮ ಚಳವಳಿ ನಡೆಸಲಾಗುವುದು ಎಂದು ಹೇಳಿದರು.

ನಮ್ಮ ನ್ಯಾಯ ಪರವಾದ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಹಾಗೂ ಸಮಾಜದ ಧ್ವನಿ ಎತ್ತುವ ಸಲುವಾಗಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ವಿವಿಧ ಕ್ಷೇತ್ರಗಳಿಂದ ಮಠಾಧೀಶರು ಕಣಕ್ಕಿಳಿಯಲು ಸಿದ್ಧರಾಗಿದ್ದು, ರಾಜಕೀಯ ಪಕ್ಷದ ಪರವಾಗಿ ಅಥವಾ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ಒಂದು ವೇಳೆ ಸರಕಾರ ನಮ್ಮ ಮೀಸಲಾತಿ ಬೇಡಿಕೆಗೆ ಸ್ಪಂದಿಸಿದರೂ, ಮಠಾಧೀಶರು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ ಎಂದು ಹೇಳಿದರು.

Join Whatsapp
Exit mobile version