Home ಟಾಪ್ ಸುದ್ದಿಗಳು ಆಸ್ಕರ್ ಪುರಸ್ಕೃತ ನಿರ್ಮಾಪಕಿಗೆ 2 ಕೋಟಿ ರೂ. ಮೊತ್ತದ ನೋಟಿಸ್ ಕಳುಹಿಸಿದ ಬೆಳ್ಳಿ-ಬೊಮ್ಮನ್

ಆಸ್ಕರ್ ಪುರಸ್ಕೃತ ನಿರ್ಮಾಪಕಿಗೆ 2 ಕೋಟಿ ರೂ. ಮೊತ್ತದ ನೋಟಿಸ್ ಕಳುಹಿಸಿದ ಬೆಳ್ಳಿ-ಬೊಮ್ಮನ್

ನವದೆಹಲಿ: ಆಸ್ಕರ್ ಪ್ರಶಸ್ತಿ ವಿಜೇತ ನಿರ್ಮಾಪಕಿ, ದಿ ಎಲಿಫೆಂಟ್ ವಿಸ್ಪರರ್ಸ್ ಡಾಕ್ಯುಮೆಂಟರಿ ನಿರ್ಮಾಣ ಮಾಡಿರುವ ಕಾರ್ತಿಕಿ ಗೊನ್ಸಾಲ್ವೆನ್ಸ್ ಅವರಿಗೆ ಈ ಸಾಕ್ಷ್ಯ ಚಿತ್ರದ ನಿಜವಾದ ಹೀರೋಗಳಾದ ಬೆಳ್ಳಿ ಮತ್ತು ಬೊಮ್ಮನ್ ಎರಡು ಕೋಟಿ ರೂಪಾಯಿಯ ನೆರವು ಕೋರಿ ನೋಟಿಸ್ ಕಳುಹಿಸಿದ್ದಾರೆ. ಜೊತೆಗೆ ಕೆಲವು ಆರೋಪಗಳನ್ನೂ ಅವರು ಮಾಡಿದ್ದಾರೆ.


ಚಿತ್ರ ನಿರ್ಮಾಣಕ್ಕೂ ಮುನ್ನ ತಮಗೆ ಮನೆ ಕಟ್ಟಿಸಿಕೊಡುವುದಾಗಿ, ವಾಹನ ಖರೀದಿಸಿ ಕೊಡುವುದಾಗಿ ಮತ್ತು ಹಣ ನೀಡುವುದಾಗಿ ಹಲವು ಭರವಸೆ ನೀಡಲಾಗಿತ್ತು.
ಆದರೆ ಚಿತ್ರ ಹೆಚ್ಚು ಲಾಭ ಗಳಿಸಿದ್ದರೂ ಇಲ್ಲಿಯವರೆಗೆ ಯಾವುದೇ ಭರವಸೆ ಈಡೇರಿಸಿಲ್ಲ. ಕರೆ ಮಾಡಿದರೂ ನಿರ್ಮಾಪಕರು ಕರೆ ಸ್ವೀಕರಿಸುತ್ತಿಲ್ಲ ಎಂದು ನಿರ್ಮಾಪಕಿ ಕಾರ್ತಿಕಿ ಗೊನ್ಸಾಲ್ವೆನ್ಸ್ ಅವರಿಗೆ ಕಾನೂನು ನೋಟಿಸ್ ಜಾರಿ ಮಾಡಲಾಗಿದೆ.

ಚಿತ್ರದಲ್ಲಿ ದಂಪತಿಗಳನ್ನು ದೇಶದಲ್ಲಿ ನಿಜವಾದ ಹೀರೋಗಳು ಎಂದು ಪರಿಚಯಿಸಿ ವ್ಯಾಪಕ ಪ್ರಚಾರ ಪಡೆದುಕೊಳ್ಳಲಾಗಿದೆ. ತೆಲಂಗಾಣ ಮುಖ್ಯಮಂತ್ರಿ, ಪ್ರಧಾನಿಗಳಿಂದ ನಿರ್ಮಾಪಕರು ಆರ್ಥಿಕ ಪ್ರಯೋಜನ ಪಡೆದಿದ್ದಾರೆ. ಆದರೆ ನಮಗೆ ನೀಡಿದ ಭರವಸೆ ಮಾತ್ರ ಈಡೇರಿಲ್ಲ ಎಂದು ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ.

Join Whatsapp
Exit mobile version