ತೊಕೊಟ್ಟು: ಜೂನ್ ಒಂದರಿಂದ ಮದ್ರಸಗಳ ಪ್ರಾರಂಭಕ್ಕೆ ಅನುಗುಣವಾಗಿ ಕಲ್ಲಾಪು ಪಟ್ಲದ ಮದ್ರಸತುಲ್ ಮುನವ್ವರದಲ್ಲಿ ಮದ್ರಸ ಪ್ರಾರಂಭ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಮಕ್ಕಳಿಗೆ ಸಿಹಿ ತಿಂಡಿಯನ್ನು ಹಂಚುವ ಮೂಲಕ ಮದ್ರಸಕ್ಕೆ ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳಲಾಯಿತು. ಮದ್ರಸದ ಆಡಳಿತ ಕಮಿಟಿ ಅಧ್ಯಕ್ಷರಾದ ಫಾರೂಕ್ ಪಟ್ಲ ಅವರು ಮಾತನಾಡಿ ಮಕ್ಕಳಿಗೆ ಉತ್ತಮ ಸಲಹೆ ಸೂಚನೆಗಳನ್ನು ನೀಡಿದರು.
ಕಾರ್ಯಕ್ರಮದಲ್ಲಿ ಮಸೀದಿ, ಮದ್ರಸದ ಆಡಳಿತ ಮಂಡಳಿಯ ಪದಾಧಿಕಾರಿಗಳು ಮತ್ತು ಮದ್ರಸದ ಸದರ್ ಮುದರ್ರಿಸ್ ಸುಲೈಮಾನ್ ಫುರ್ಖಾನಿ ಯವರು ಉಪಸ್ಥಿತರಿದ್ದರು.