Home ಟಾಪ್ ಸುದ್ದಿಗಳು ‘ಸ್ಟ್ಯಾನ್ ಸ್ವಾಮಿಯ ಪ್ರಭುತ್ವದ ಕೊಲೆ’: ಜೈಲಿನೊಳಗೆ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಕೈದಿಗಳು

‘ಸ್ಟ್ಯಾನ್ ಸ್ವಾಮಿಯ ಪ್ರಭುತ್ವದ ಕೊಲೆ’: ಜೈಲಿನೊಳಗೆ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಕೈದಿಗಳು

ತ್ರಿಶೂರ್: ಸ್ಟ್ಯಾನ್ ಸ್ವಾಮಿಯನ್ನು ಪ್ರಭುತ್ವ ಕೊಲೆ ನಡೆಸಿದೆ ಎಂದು ಆರೋಪಿಸಿ ಹತ್ತು ಕೈದಿಗಳು ಕೇರಳದ ವಿಯೂರ್ ಜೈಲಿನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

UAPA ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ರೂಪೇಶ್, ರಾಜೀವನ್, ರಾಜನ್ ಮತ್ತು ಧನೀಶ್ ಸೇರಿದಂತೆ 10 ಮಂದಿ ಕೈದಿಗಳು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಮುನ್ನ ಒಂದು ನಿಮಿಷ ಮೌನ ಆಚರಿಸಲು ಅನುಮತಿ ಕೋರಿ ಸತ್ಯಾಗ್ರಹ ನಡೆಸುತ್ತಿರುವ ಕೈದಿಗಳಲ್ಲೊಬ್ಬನಾದ ರೂಪೇಶ್ ಎರ್ನಾಕುಳಂನ NIA ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದನು. ಆದರೆ, ಇದು ನ್ಯಾಯಾಲಯದ ಶಿಷ್ಟಾಚಾರಕ್ಕೆ ವಿರುದ್ಧವಾಗಿದೆ ಎಂದು ನ್ಯಾಯಾಲಯ ಅರ್ಜಿಯನ್ನು ತಿರಸ್ಕರಿಸಿದೆ.

ಮಾವೋವಾದಿ ಪ್ರಕರಣಗಳಲ್ಲಿ ಬಂಧಿತರಾದ ರೂಪೇಶ್, ಅನೂಪ್, ಇಬ್ರಾಹಿಂ ಮತ್ತು ಕನ್ಯಾಕುಮಾರಿ ಅವರ ವಿಚಾರಣೆಯನ್ನು ಎರ್ನಾಕುಳಂ NIA ನ್ಯಾಯಾಲಯ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸುತ್ತಿದೆ.

Join Whatsapp
Exit mobile version