ಕೊಚ್ಚಿ: ಕಾಂಗ್ರೆಸ್ ನಾಯಕ ಅಂಜೇರಿ ಬೇಬಿ ಕೊಲೆ ಪ್ರಕರಣದಲ್ಲಿ ಕೇರಳದ ಮಾಜಿ ಸಚಿವ, ಹಿರಿಯ ಸಿ.ಪಿ.ಐ.ಎಂ ನಾಯಕ ಎಂ. ಎಂ ಮಣಿ ಖುಲಾಸೆಗೊಂಡಿದ್ದಾರೆ.
ಸೆಷನ್ಸ್ ಕೋರ್ಟ್ ತೀರ್ಪಿನ ವಿರುದ್ಧ ಎಂ.ಎಂ. ಮಣಿ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿದ ಕೇರಳ ಹೈಕೋರ್ಟ್ ಮಣಿ ಸೇರಿದಂತೆ ಮೂವರು ಆರೋಪಿಗಳನ್ನು ಖುಲಾಸೆಗೊಳಿಸಿದೆ. ಜಿ. ಮದನನ್, ಪಾಂಬುರಪ್ಪಾರ ಕುಟ್ಟನ್, ಮಣಿ ಅವರೊಂದಿಗೆ ಖುಲಾಸೆಗೊಂಡ ಆರೋಪಿಗಳಾಗಿದ್ದಾರೆ.
ಸ್ಥಳೀಯ ಕಾಂಗ್ರೆಸ್ ನಾಯಕ ಅಂಜೇರಿ ಬೇಬಿಯನ್ನು 1982ರ ನವೆಂಬರ್ 13 ರಂದು ಗುಂಡಿಕ್ಕಿ ಹತ್ಯೆಗೈಯ್ಯಲಾಗಿತ್ತು. ಸಿಪಿಐ (ಎಂ) ಸ್ಥಳೀಯ ನಾಯಕ ಮೋಹನ್‌ದಾಸ್ ಹತ್ಯೆ ಪ್ರಕರಣದಲ್ಲಿ ಬೇಬಿ ಮೂರನೇ ಆರೋಪಿಯಾಗಿದ್ದರು.