Home ಟಾಪ್ ಸುದ್ದಿಗಳು ನಕಲಿ ಖಾತೆಗಳ ಹಾವಳಿ; ಟ್ವಿಟರ್‌ನಿಂದ ಬ್ಲೂ ಟಿಕ್ ಚಂದಾದಾರಿಕೆ ಸೇವೆ ಸ್ಥಗಿತ

ನಕಲಿ ಖಾತೆಗಳ ಹಾವಳಿ; ಟ್ವಿಟರ್‌ನಿಂದ ಬ್ಲೂ ಟಿಕ್ ಚಂದಾದಾರಿಕೆ ಸೇವೆ ಸ್ಥಗಿತ

ವಾಷಿಂಗ್ಟನ್: ನಕಲಿ ಖಾತೆಗಳ ಹಾವಳಿ ಹಿನ್ನೆಲೆಯಲ್ಲಿ ವೆರಿಫೈಡ್ ಖಾತೆಗಳಿಗೆ ಮಾಸಿಕ ಎಂಟು ಡಾಲರ್ ಶುಲ್ಕ ವಿಧಿಸುವ ಟ್ವಿಟರ್ ಬ್ಲೂ ಚಂದಾದಾರಿಕೆ ಸೇವೆಯನ್ನು ಟ್ವಿಟರ್ ಸಂಸ್ಥೆ ಸ್ಥಗಿತಗೊಳಿಸಿದೆ.


ಟ್ವಿಟರ್‌ನಲ್ಲಿ ನಕಲಿ ಖಾತೆ ಕಾಣಿಸಿಕೊಂಡಿರುವುದೇ ತನ್ನ ಫ್ಲ್ಯಾಟ್‌ಫಾರ್ಮ್‌ನಿಂದ ಬೂ ಟಿಕ್ ಮಾರ್ಕ್ ತೆಗೆದು ಹಾಕಲು ಕಾರಣ ಎನ್ನಲಾಗಿದೆ.
ಈ ಸೇವೆಯನ್ನು ಟ್ವಿಟರ್ ಮೊದಲು ಐಫೋನ್‌ನ ಐಒಎಸ್ ಬಳಕೆದಾರರಿಗೆ ಒದಗಿಸಿತ್ತು. ಆದರೆ ಬಳಕೆದಾರರಿಗೆ ಚಂದಾದಾರಿಕೆ ಸೇವೆ ಲಭ್ಯವಾಗುತ್ತಿಲ್ಲ ಎಂದು ತಿಳಿದು ಬಂದಿದೆ.


ಈ ಮಧ್ಯೆ ಎಲಾನ್ ಮಸ್ಕ್ ಅವರ ಟೆಸ್ಲಾ, ಸ್ಪೇಸ್ ಎಕ್ಸ್ ಸೇರಿದಂತೆ ಹಲವು ಪ್ರಸಿದ್ಧ ಖಾತೆಗಳ ನಕಲಿ ಖಾತೆಗಳು ಸೃಷ್ಟಿಯಾಗಿದ್ದು, ಕೆಲವು ಖಾತೆಗಳಿಗೆ ಟ್ವಿಟರ್ ‘ಅಧಿಕೃತ’ ಬ್ಯಾಡ್ಜ್ ಅನ್ನು ಮರು ಸ್ಥಾಪಿಸಿದೆ ಎಂದು ಟ್ವಿಟರ್ ಸಪೋರ್ಟ್ ಟ್ವೀಟ್ ಮಾಡಿದೆ.

Join Whatsapp
Exit mobile version