Home ಟಾಪ್ ಸುದ್ದಿಗಳು ಅರಸುರ ಹೆಜ್ಜೆ ಗುರುತುಗಳು ನಮಗೆ ಇಂದಿಗೂ ಆದರ್ಶ: ಸಿಎಂ ಬಸವರಾಜ ಬೊಮ್ಮಾಯಿ

ಅರಸುರ ಹೆಜ್ಜೆ ಗುರುತುಗಳು ನಮಗೆ ಇಂದಿಗೂ ಆದರ್ಶ: ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ಇಂದು ರಾಜ್ಯದ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ್ ಅರಸುರ 106ರ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ವಿಧಾನ ಸೌಧದ ಆವರಣದಲ್ಲಿ ದೇವರಾಜ ಅರಸು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ್ದಾರೆ.


ಬಳಿಕ ಮಾತನಾಡಿದ ಅವರು, ಹಿಂದುಳಿದ ವರ್ಗಗಳ ಏಳಿಗೆ, ಸ್ವಾಭಿಮಾನ ಬದುಕಿಗಾಗಿ ಬದ್ಧತೆಯಿಂದ ಕೆಲಸ ಮಾಡಬೇಕಾಗಿರುವ ದಿನವಾಗಿದೆ. ಅರಸುರವರ ಕ್ರಾಂತಿಕಾರಿ ಭೂಸುಧಾರಣೆ ನಮಗೆ ಆದರ್ಶ. ‘ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು’ ಇದನ್ನು ಅಕ್ಷರಶಃ ಪಾಲಿಸಿದವರು ದೇವರಾಜ ಅರಸು. ಅರಸುರವರ ಹೆಜ್ಜೆ ಗುರುತುಗಳು ನಮಗೆ ಇಂದಿಗೂ ಆದರ್ಶ ಎಂದು ಹೇಳುವ ಮೂಲಕ ದೇವರಾಜ ಅರಸುರವರ ಸಾಧನೆಯನ್ನು ನೆನಪಿಸಿಕೊಂಡಿದ್ದಾರೆ.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಡಿ.ದೇವರಾಜ ಅರಸು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
2019-20ನೇ ಸಾಲಿನಲ್ಲಿ ಬಸವಪ್ರಭು ಲಕನಗೌಡ ಪಾಟೀಲ್, 2020-21ನೇ ಸಾಲಿನಲ್ಲಿ ಸುಶೀಲಮ್ಮಗೆ ದೇವರಾಜ ಅರಸು ಪ್ರಶಸ್ತಿ, 2021-22ನೇ ಸಾಲಿನಲ್ಲಿ ಭಾಸ್ಕರ್ ದಾಸ್ ಎಕ್ಕಾರ್ ಗೆ ಪ್ರಶಸ್ತಿ ನೀಡಲಾಗಿದೆ.
ಈ ಸಂದರ್ಭ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ , ಶಾಸಕ ರಿಜ್ವಾನ್ ಅರ್ಷದ್ ಸಮಾರಂಭದಲ್ಲಿ ಭಾಗಿಯಾಗಿದ್ದರು.

Join Whatsapp
Exit mobile version