ತಮಿಳುನಾಡು ಚಿತ್ರಮಂದಿರಗಳಲ್ಲಿ ‘ದಿ ಕೇರಳ ಸ್ಟೋರಿ‘ ಸಿನಿಮಾ ರದ್ದು

Prasthutha|

ಚೆನ್ನೈ: ಭಾರಿ ವಿವಾದಕ್ಕೊಳಗಾದ ‘ದಿ ಕೇರಳ ಸ್ಟೋರಿ‘ ಸಿನಿಮಾದ ಪ್ರದರ್ಶನವನ್ನು ತಮಿಳುನಾಡಿನಲ್ಲಿ ಭಾನುವಾರದಿಂದ ಸ್ಥಗಿತಗೊಳಿಸಲಾಗಿದೆ.

- Advertisement -


ಚಿತ್ರ ಪ್ರದರ್ಶನ ಸ್ಥಗಿತಗೊಳಿಸಿದ ಬಗ್ಗೆ ಪತ್ರಕರ್ತ ಶ್ರೀಧರ್ ಪಿಳೈ ಟ್ವೀಟ್ ಮಾಡಿದ್ದು, ಭಾನುವಾರದಂದು ‘ದಿ ಕೇರಳ ಸ್ಟೋರಿ ಸಿನಿಮಾ‘ದ ಟಿಕೆಟ್ ಬುಕ್ ಮಾಡಲು ಹೋದಾಗ ಮಲ್ಟಿಫೆಕ್ಸ್ ಗಳಲ್ಲಿ ಚಿತ್ರ ಪ್ರದರ್ಶನ ರದ್ದಾಗಿರುವುದು ತಿಳಿದುಬಂದಿದೆ. ಕಾನೂನು ತೊಡಕು ಮತ್ತು ಸಿನಿಮಾ ಪ್ರದರ್ಶನದ ಬಗ್ಗೆ ನಿರಾಸಕ್ತಿ ಪ್ರದರ್ಶನ ರದ್ದತಿಗೆ ಕಾರಣವಾಗಿದೆ ಎಂದು ಮಲ್ಟಿಫ್ಲೆಕ್ಸ್ ಮಾಲೀಕರು ಹೇಳುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ.