ಅಮೆರಿಕ: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ವಂಚನೆ ಪ್ರಕರಣದಲ್ಲಿ 36 ಕೋಟಿ ಡಾಲರ್ (ಸುಮಾರು ಮೂರು ಸಾವಿರ ಕೋಟಿ ರೂ. ನಷ್ಟು) ದಂಡ ವಿಧಿಸಲಾಗಿದೆ.
ಇದು ಪಕ್ಷಪಾತ ಹಾಗೂ ಅನ್ಯಾಯದಿಂದ ಕೂಡಿದ ತೀರ್ಪು ಎಂದು ಟ್ರಂಪ್ ಬೆಂಬಲಿಗರು ಹುಯಿಲೆಬ್ಬಿಸಿದ್ದಾರೆ.
ಡೊನಾಲ್ಡ್ ಟ್ರಂಪ್ ಗೆ ಸಂಬಂಧಿಸಿದ ಸಂಸ್ಥೆಗಳಿಗೆ ನಿರ್ಬಂಧವನ್ನೂ ವಿಧಿಸಲಾಗಿದ್ದು, ಮೂರು ವರ್ಷಗಳ ಕಾಲ ನ್ಯೂಯಾರ್ಕ್ ನಲ್ಲಿ ಯಾವುದೇ ವಹಿವಾಟು, ಆಸ್ತಿ ಮಾರಾಟ, ಖರೀದಿ ನಡೆಸದಂತೆ ಡೊನಾಲ್ಡ್ ಟ್ರಂಪ್ ಮೇಲೆ ನಿಷೇಧ ಹೇರಲಾಗಿದೆ.
ಈ ಆದೇಶವನ್ನು ಮೇಲಿನ ಕೋರ್ಟ್ ನಲ್ಲಿ ಪ್ರಶ್ನಿಸುವುದಾಗಿ ಡೊನಾಲ್ಡ್ ಟ್ರಂಪ್ ವಕೀಲರು ಹೇಳಿದ್ದಾರೆ.
ಈ ಆದೇಶವನ್ನು ಓದುವ ವೇಳೆ ನ್ಯಾಯಾಧೀಶರಾದ ಅರ್ಥರ್ ಎಂಗೋರೊನ್ ಅವರು ಟ್ರಂಪ್ ಕಡೆಗೆ ನೋಡಿ ಅಪಹಾಸ್ಯದ ನಗೆ ನಕ್ಕಿರುವುದು ಈಗ ವಿವಾದಕ್ಕೀಡಾಗಿದೆ.