ಚಿಕ್ಕಮಗಳೂರು : ಮಳೆ ಅಬ್ಬರಕ್ಕೆ ಗುಡ್ಡ ಜರಿದು ಕಾಫಿ ತೋಟ ಕೊಚ್ಚಿ ಹೋದ ಘಟನೆ ತಂಬಳ್ಳಿಪುರ ಗ್ರಾಮದಲ್ಲಿ ನಡೆದಿದೆ.
ಹುಣಸೇಹಳ್ಳಿ ಸಮೀಪದ ತಂಬಳ್ಳಿಪುರ ಅಣ್ಣಪ್ಪಶೆಟ್ಟಿ ಎಂಬವರ ಒಂದು ಎಕರೆ ಕಾಫಿ ತೋಟ ಸರ್ವ ನಾಶವಾಗಿದೆ.
ರಾತ್ರಿ ಬೆಳಗಾಗುವುದರೊಳಗೆ ತೋಟದಲ್ಲಿ ಹಳ್ಳ ಕೊಳ್ಳಗಳು ಸೃಷ್ಟಿಯಾಗಿದ್ದು, ಬೆಳೆದು ನಿಂತಿದ್ದ ಮೆಣಸು, ಅಡಿಕೆ, ಕಾಫಿ, ಬಾಳೆ ನಾಶವಾಗಿದೆ.