ರಷ್ಯಾ- ಉಕ್ರೇನ್ ಯುದ್ಧ ಪರಿಣಾಮ; ವಾಹನಗಳ ತಯಾರಿಕೆ ಸ್ಥಗಿತ, ದರ ಏರಿಕೆ ಸಾಧ್ಯತೆ

Prasthutha|

ಅಮೆರಿಕ: ಮುಂದಿನ ವರ್ಷದಿಂದ ವಾಹನಗಳ ದರದಲ್ಲಿ ಗಣನೀಯ ಏರಿಕೆಯಾಗುವ ಎಲ್ಲ ಸಾಧ್ಯತೆಗಳಿದ್ದು, ಕೆಲವೊಂದು ಕಂಪನಿಗಳು ತಯಾರಿಕೆಯನ್ನೇ ಸ್ಥಗಿತಗೊಳಿಸಲಿದೆ ಎಂದು ಪ್ರಮುಖ ಮಾಧ್ಯಮಗಳು ವರದಿ ಮಾಡಿವೆ.

- Advertisement -

ಆಟೋ ತಯಾರಿಕೆಯಲ್ಲಿ ಅತ್ಯಂತ ಮಹ ತ್ವದ ಪಾತ್ರ ವಹಿಸುವ, ಉಕ್ರೇನ್‌ನಲ್ಲಿ ತಯಾರಾಗುವ ಎಲೆಕ್ಟ್ರಿಕಲ್‌ ವೈರಿಂಗ್‌ ದಿಢೀರನೆ ಕೈಗೆಟುಕದ ಸ್ಥಿತಿ ನಿರ್ಮಾಣವಾಗಿದ್ದು, ಇವುಗಳ ಬೇಡಿಕೆ ತೀವ್ರವಾಗಿ ಹೆಚ್ಚುತ್ತಿದ್ದರೂ, ಯುದ್ಧದಿಂದಾಗಿ ಎಲೆಕ್ಟ್ರಿಕಲ್‌ ವೈರಿಂಗ್‌ನ ಪರಿಕರಗಳು ಸಿಗದ ಅವಸ್ಥೆ ನಿರ್ಮಾಣವಾಗಿದೆ.

ಇದರ ಪರಿಣಾಮವಾಗಿ ಜರ್ಮನಿಯಲ್ಲಿರುವ ಬಿಎಂಡಬ್ಲ್ಯೂ ಕಾರು ಕಂಪೆನಿಯ ಶಾಖೆ, ತನ್ನ ಕಾರುಗಳ ತಯಾರಿಕೆಯನ್ನೇ ಸ್ಥಗಿತಗೊಳಿಸಿದ್ದು, ಮರ್ಸಿಡಿಸ್‌ ಕೂಡ ತನ್ನ ಕಾರು ಜೋಡಣಾ ಸ್ಥಾವರ ಗಳಲ್ಲಿ ಕೆಲಸವನ್ನು ನಿಧಾನಗತಿಗೆ ಇಳಿಸಿದೆ. ಫೋಕ್ಸ್‌ವ್ಯಾಗನ್‌ ಕೂಡ ಸ್ಥಗಿತಗೊಳ್ಳುವ ಸೂಚನೆ ನೀಡಿದೆ.

- Advertisement -

ಇದರ ಬಿಸಿ ಅಮೆರಿಕಕ್ಕೂ ತಟ್ಟಿದ ಪರಿಣಾಮ ವಿದ್ಯುತ್‌ಚಾಲಿತ ವಾಹನಗಳ ಬ್ಯಾಟರಿಗಳಲ್ಲಿ ಬಳಸಲಾಗುವ ನಿಕ್ಕಲ್‌ ನಂತಹ ಹಲವು ಲೋಹಗಳ ರಫ್ತನ್ನು ರಷ್ಯಾ ಸ್ಥಗಿತಗೊಳಿಸಿದೆ.

ಇದರಿಂದಾಗಿ ಅಮೆರಿಕದ ಆಟೋ ವಲಯವು ಭಾರೀ ಸಮಸ್ಯೆಗೆ ಸಿಲುಕಲಿದ್ದು, ವಾಹನಗಳ ತಯಾರಿಕೆ ಪ್ರಮಾಣ ಕುಗ್ಗುವುದಲ್ಲದೇ, ಅವುಗಳ ದರವೂ ಏರಿಕೆಯಾಗಲಿದೆ.

Join Whatsapp
Exit mobile version