Home ಟಾಪ್ ಸುದ್ದಿಗಳು ಹೆಂಡತಿಯ ಕಾಲುಗಳನ್ನು ಬೈಕ್‌‌ಗೆ ಕಟ್ಟಿ ರಸ್ತೆಯಲ್ಲಿ ಎಳೆದುಕೊಂಡು ಹೋದ ಪತಿ

ಹೆಂಡತಿಯ ಕಾಲುಗಳನ್ನು ಬೈಕ್‌‌ಗೆ ಕಟ್ಟಿ ರಸ್ತೆಯಲ್ಲಿ ಎಳೆದುಕೊಂಡು ಹೋದ ಪತಿ

ಜೈಪುರ: ವ್ಯಕ್ತಿಯೊಬ್ಬ ಹೆಂಡತಿಯ ಕಾಲುಗಳನ್ನು ಬೈಕ್‌‌ಗೆ ಕಟ್ಟಿ ರಸ್ತೆಯಲ್ಲಿ ಎಳೆದುಕೊಂಡು ಹೋದ ಅಮಾನವೀಯ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ನಹರ್‌ಸಿಂಗ್‌ಪುರ ನಿವಾಸಿ ಪ್ರೇರಮಂ ಮೇಘಾವಲ್‌ ಎಂಬಾತ ಈ ಕ್ರೂರ ಕೃತ್ಯ ಎಸಗಿದ ಆರೋಪಿ.

ನಾಗೌರ್‌ ಜಿಲ್ಲೆಯಲ್ಲಿ ಈ ಹೀನ ಕೃತ್ಯ ಒಂದು ತಿಂಗಳ ಹಿಂದೆ ನಡೆದಿದ್ದು, ಹೀನ ಕೃತ್ಯದ ವೀಡಿಯೋ ಈಗ ಬಹಿರಂಗಗೊಂಡಿದೆ. ಆರೋಪಿಯನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.

ಈ ಕ್ರೂರ ಕೃತ್ಯವನ್ನು ಯಾರೋ ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಿದ್ದು, ಆ ವೀಡಿಯೊ ವೈರಲ್‌ ಆಗುತ್ತಿದೆ.

ಆರು ತಿಂಗಳ ಹಿಂದೆ ಪ್ರೇರಮಂ ಮೇಘಾವಲ್‌ ಬಿಹಾರ ಮೂಲದ ಸುಮಿತ್ರಾ ಎಂಬಾಕೆಯನ್ನು ವಿವಾಹವಾಗಿದ್ದನು. ಮದು ಸಮಯದಲ್ಲಿ ಸುಮಿತ್ರಾಳ ಆಕೆಯ ಪೋಷಕರು ಅಪಾರ ವರದಕ್ಷಿಣೆ ಮೇಘಾವಲ್‌ಗೆ ನೀಡಿದ್ದರು ಎನ್ನಲಾಗಿದೆ. ಮದುವೆಯ ಬಳಿಕ ದಂಪತಿ ನಹರ್‌ಸಿಂಗ್‌ಪುರದಲ್ಲಿ ಬಂದು ನೆಲೆಸಿದ್ದರು. ಅಲ್ಲಿ ಇಬ್ಬರು ಸದಾ ಜಗಳವಾಡುತ್ತಿದ್ದರು ಎಂದು ನೆರೆಹೊರೆಯವರು ಹೇಳಿದ್ದಾರೆ.

ತಿಂಗಳ ಹಿಂದೆ ಸುಮಿತ್ರಾ ತನ್ನ ಸಹೋದರಿಯ ಮನೆಗೆ ಹೋಗುವ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿದ್ದು, ಈ ಹಂತದಲ್ಲಿ ಮೇಘಾವಲ್‌ ಸುಮಿತ್ರಾಳ ಕಾಲನ್ನು ಬೈಕಿಗೆ ಕಟ್ಟಿ ಚಲಾಯಿಸಿದ್ದಾನೆ. ಘಟನೆಯಲ್ಲಿ ಸುಮಿತ್ರಾಗೆ ಗಂಭೀರ ಗಾಯಗಳಾಗಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎನ್ನಲಾಗಿದೆ.

ನಾಗೌರ್‌ ಜಿಲ್ಲೆಯಲ್ಲಿ ಈ ಹೀನ ಕೃತ್ಯ ಒಂದು ತಿಂಗಳ ಹಿಂದೆ ನಡೆದಿದ್ದು, ವೀಡಿಯೋ ನೋಡಿದ ನಾಗೌರ್‌ನ ಪಂಚೌರಿ ಪೊಲೀಸ್ ಠಾಣೆ ಪೊಲೀಸರು ಆರೋಪಿಯನ್ನು ಗುರುತಿಸಿ ಸೋಮವಾರ ಬಂಧಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತೆಯ ಪತ್ನಿ ಇನ್ನೂ ಯಾವುದೇ ದೂರು ದಾಖಲಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಹೀಗಾಗಿ ಪೊಲೀಸರು ತಮ್ಮ ಮಟ್ಟದಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Join Whatsapp
Exit mobile version