ಬೀಚ್ ನಲ್ಲಿ ಸೆಲ್ಫಿ ತೆಗೆಯಲು ಹೋಗಿ ವ್ಯಕ್ತಿ ಸಮುದ್ರಪಾಲು

Prasthutha|

ಕಾರವಾರ: ಸೆಲ್ಫಿ ತೆಗಿಯಲು ಹೋದ ಯುವಕ ಕಾಲುಜಾರಿ ಬಿದ್ದು ಸಮುದ್ರ ಪಾಲಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಓಂ ಬೀಚ್‍ನಲ್ಲಿ ನಡೆದಿದೆ.

ಕುಮಾರ್ ಶೇಕಪ್ಪ(35) ಸಮುದ್ರಪಾಲಾದ ವ್ಯಕ್ತಿ

- Advertisement -

ಕುಮಾರ್ ಶೇಕಪ್ಪ ಹಾವೇರಿ ಜಿಲ್ಲೆಯ ಹಾನಗಲ್ ನಿವಾಸಿ ಎಂಬ ಮಾಹಿತಿ ತಿಳಿದುಬಂದಿದ್ದು,  ಇಂದು ಮಧ್ಯಾಹ್ನ ಹಾನಗಲ್ ನಿಂದ ಗೋಕರ್ಣಕ್ಕೆ 12 ಜನರೊಂದಿಗೆ ಆಗಮಿಸಿದ್ದ ಅವರು ಓಂ ಬೀಚ್‍ ನ ಬಲಭಾಗದಲ್ಲಿರುವ ಸಮುದ್ರ ತೀರದ ಕಲ್ಲುಬಂಡೆ ಬಳಿ ಸೆಲ್ಫಿ ತೆಗೆದುಕೊಳ್ಳಲು ತೆರಳಿದ್ದರು. ಈ ವೇಳೆ ಅಲೆಗಳ ಹೊಡೆತಕ್ಕೆ ಕುಮಾರ್ ಶೇಕಪ್ಪ ಸಮುದ್ರದಲ್ಲಿ ಕೊಚ್ಚಿಹೋಗಿದ್ದಾರೆ.

ಲೈಫ್ ಗಾರ್ಡ್ ಗಳು ರಕ್ಷಿಸುವ ಪ್ರಯತ್ನ ಮಾಡಿದರಾದರೂ ರಕ್ಷಣೆ ಸಾಧ್ಯವಾಗಿಲ್ಲ. ಈತನ ಶವಕ್ಕಾಗಿ ಪೊಲೀಸರಿಂದ ಶೋಧ ಕಾರ್ಯ ನಡೆಯುತಿದ್ದು, ಗೋಕರ್ಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -