Home ಟಾಪ್ ಸುದ್ದಿಗಳು ಡೆಂಗ್ಯೂ ಪರೀಕ್ಷೆಗೆ ದರ ನಿಗದಿ ಮಾಡಿ ಆದೇಶ ಹೊರಡಿಸಿದ ಸರಕಾರ

ಡೆಂಗ್ಯೂ ಪರೀಕ್ಷೆಗೆ ದರ ನಿಗದಿ ಮಾಡಿ ಆದೇಶ ಹೊರಡಿಸಿದ ಸರಕಾರ

ಬೆಂಗಳೂರು: ರಾಜ್ಯದಲ್ಲಿ ಡೆಂಗ್ಯೂ ಆರ್ಭಟ ಹೆಚ್ಚಾಗುತ್ತಿದೆ. ಡೆಂಗ್ಯೂ ಪರೀಕ್ಷೆಯನ್ನು ಹೆಚ್ಚು ಮಾಡುವಂತೆ ಸೂಚಿಸಿದ ಆರೋಗ್ಯ ಇಲಾಖೆ ಈಗ ಡೆಂಗ್ಯೂ ಪರೀಕ್ಷೆಗೆ ದರ ನಿಗದಿ ಮಾಡಿ ಅಧಿಕೃತ ಆದೇಶ ಹೊರಡಿಸಿದೆ.

ಪ್ರಸ್ತುತ ರಾಜ್ಯದಲ್ಲಿ ಡೆಂಗ್ಯೂ ಜ್ವರ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಸಾರ್ವಜನಿಕ ಹಿತದೃಷ್ಠಿಯಿಂದ ಡೆಂಗ್ಯೂ ಪತ್ತೆ ಹಚ್ಚುವ ಪರೀಕ್ಷೆಗಳಾದಂತ ಎಲಿಸಾ, ರಾಪಿಡ್ ಟೆಸ್ಟ್ ಗಳಿಗೆ ಈ ಕೆಳಕಗಿನಂತೆ ದರ ನಿಗದಿಪಡಿಸಿದೆ.

ಹೀಗಿದೆ ಡೆಂಗ್ಯೂ ಪತ್ತೆ ಪರೀಕ್ಷೆಯ ದರ ಪಟ್ಟಿ

ಡೆಂಗ್ಯೂ ಎಲಿಸಾ ಎನ್‌ಎಸ್1- ರೂ.300
ಡೆಂಗ್ಯೂ ಎಲಿಸಾ ಐಜಿಎಂ – ರೂ.300
ಸ್ಕ್ರೀನ್ ಟೆಸ್ಟ್ ರಾಪಿಡ್ ಕಾರ್ಡ್ ಎನ್‌ಎಸ್1, ಐಜಿಎಂ ಮತ್ತು ಐಜಿಜಿ – ಒಟ್ಟು ರೂ.250
ಈ ಮೇಲ್ಕಂಡ ದರಗಳನ್ನು ವಿಧಿಸಬೇಕು. ಇದರ ಹೊರತಾಗಿ ಹೆಚ್ಚುವರಿ ದರ ವಸೂಲಿ ಮಾಡಿದ್ರೆ ಕರ್ನಾಟಕ ಸಾಂಕ್ರಾಮಿಕ ರೋಗಗಳ ಅಧಿನಿಯಮದಂತೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಅಂತ ಲ್ಯಾಬ್ ಗಳಿಗೆ ರಾಜ್ಯ ಸರ್ಕಾರ ಎಚ್ಚರಿಕೆ ನೀಡಿದೆ.

Join Whatsapp
Exit mobile version