ಬಳ್ಳಾರಿ: ನೂರಾರು ವರ್ಷಗಳ ಇತಿಹಾಸ ಹೊಂದಿರುವ ಇಲ್ಲಿನ ವಿಜಯನಗರ ವೈದ್ಯಕೀಯ ವಿಜ್ಷಾನ ಸಂಸ್ಥೆ (ವಿಮ್ಸ್) ಆಸ್ಪತ್ರೆ ಇನ್ನು ಮುಂದೆ ಬಿಮ್ಸ್ ಆಗಿ ಮಾರ್ಪಾಡಾಗಲಿದೆ.
ಅಖಂಡ ಬಳ್ಳಾರಿ ಜಿಲ್ಲೆಯಲಿದ್ದ ವೇಳೆಯಲ್ಲಿ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯಾಗಿದ್ದ ವಿಮ್ಸ್ ಆಸ್ಪತ್ರೆಯ ಹೆಸರನ್ನು ಇದೀಗ ಬದಲಾವಣೆ ಮಾಡಲಾಗುತ್ತಿದೆ. ಹಿಂದಿನ ಬಿಜೆಪಿ ಸರ್ಕಾರ ಅಧಿಕಾರವಿದ್ದ ವೇಳೆ ಅಖಂಡ ಬಳ್ಳಾರಿ ಜಿಲ್ಲೆಯನ್ನು ವಿಭಜನೆ ಮಾಡಿ ವಿಜಯನಗರ ಜಿಲ್ಲೆಯನ್ನು ಪ್ರತೇಕವಾಗಿ ರಚನೆ ಮಾಡಲಾಗಿತ್ತು. ಇದೀಗ ವಿಜಯನಗರ ಅನ್ನೋ ಹೆಸರಿನಲ್ಲಿರುವ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಹೆಸರನ್ನ ಬಿಮ್ಸ್ ಆಗಿ ಬದಲಾಯಿಸಲು ಕಾಂಗ್ರೆಸ್ ಸರ್ಕಾರ ಇದೀಗ ಮುಂದಾಗಿದೆ.
ಬಿಜೆಪಿಯ ಮಾಜಿ ಸಚಿವ ಆನಂದ್ ಸಿಂಗ್ ವಿಜಯನಗರ ಜಿಲ್ಲೆಯನ್ನು ಪ್ರತ್ಯೇಕವಾಗಿ ರಚನೆ ಮಾಡಿಸಿದ್ರೆ, ಕಾಂಗ್ರೆಸ್ ಸಚಿವ ಬಿ ನಾಗೇಂದ್ರ ವಿಜಯನಗರ ಅನ್ನೋ ಹೆಸರಿನಲ್ಲಿರುವ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಹೆಸರನ್ನ ಬಿಮ್ಸ್ ಆಗಿ ಬದಲಾಯಿಸಲು ಮುಂದಾಗಿದ್ದಾರೆ. ವಿಜಯನಗರ ಜಿಲ್ಲೆ ಪ್ರತ್ಯೇಕವಾದ ನಂತರ ವಿಜಯನಗರದ ಹೆಸರಿನಲ್ಲಿ ವೈದ್ಯಕೀಯ ಕಾಲೇಜು ಆಸ್ಪತ್ರೆ ಬೇಡ. ನಮ್ಮ ಬಳ್ಳಾರಿಯ ಹೆಸರಿನಲ್ಲೆ ವಿಮ್ಸ್ ಅನ್ನು ಬಿಮ್ಸ್ ಆಗಿ ಬದಲಾಯಿಸಲು ಸಚಿವರು ಮುಂದಾಗಿದ್ದಾರೆ. ಕಾಂಗ್ರೆಸ್ ಸಚಿವರ ನಿರ್ಧಾರಕ್ಕೆ ಜಿಲ್ಲೆಯ ಕಾಂಗ್ರೆಸ್ ಶಾಸಕರು ಸಹ ಇದೀಗ ಬೆಂಬಲ ನೀಡಿದ್ದಾರೆ. ಅಲ್ಲದೇ ಅಖಂಡ ಬಳ್ಳಾರಿ ಜಿಲ್ಲೆ ವಿಭಜನೆ ವೇಳೆ ಹೋರಾಟ ಮಾಡಿದವರು ಸಹ ಬಿಮ್ಸ್ ಹೆಸರಿನಲ್ಲಿ ವೈದ್ಯಕೀಯ ಕಾಲೇಜು ನಡೆಯಲಿ ಎಂದು ಸರ್ಕಾರಕ್ಕೆ ಒತ್ತಾಯ ಮಾಡುತ್ತಿದ್ದಾರೆ ಎನ್ನಲಾಗಿದೆ.