Home ಟಾಪ್ ಸುದ್ದಿಗಳು ಹಿಂದೂ ರಾಷ್ಟ್ರದ ಗುರಿ ತಯಾರಾಗಿದೆ; ಅದಕ್ಕಾಗಿ ಜನರನ್ನು ಸಿದ್ಧಪಡಿಸಲಾಗುತ್ತಿದೆ: ಮೋಹನ್‌ ಭಾಗವತ್‌

ಹಿಂದೂ ರಾಷ್ಟ್ರದ ಗುರಿ ತಯಾರಾಗಿದೆ; ಅದಕ್ಕಾಗಿ ಜನರನ್ನು ಸಿದ್ಧಪಡಿಸಲಾಗುತ್ತಿದೆ: ಮೋಹನ್‌ ಭಾಗವತ್‌

ಹೊಸದಿಲ್ಲಿ: ಭಾರತವು ತನ್ನ ಪ್ರಗತಿಯ ಪಯಣವನ್ನು ಪ್ರಾರಂಭಿಸಿದ್ದು, ಅದನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ದೇಶದ ಮುಸ್ಲಿಮರಿಗೆ ದಿನನಿತ್ಯ ಧಾರ್ಮಿಕ ಆಧಾರದಲ್ಲಿ ತಾರತಮ್ಯವಾಗುತ್ತಿರುವ ಮಧ್ಯೆ ಭಾಗವತ್ ಅವರ ಈ ಹೇಳಿಕೆ ಭಾರಿ ಗೊಂದಲವನ್ನುಂಟುಮಾಡಿದ್ದು, ಪ್ರಗತಿ ಎಂಬ ಪದವನ್ನು ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆ ಎಂಬ ಪ್ರಶ್ನೆ ಉಧ್ಬವಿಸಿದೆ.

ಹರಿದ್ವಾರದಲ್ಲಿ ಸಂತರ ಸಭೆಯನ್ನುದ್ದೇಶಿಸಿ ಭಾಷಣ ಮಾಡಿದ ಅವರು, ಸ್ವಾಮಿ ವಿವೇಕಾನಂದ ಮತ್ತು ಮಹರ್ಷಿ ಅರಬಿಂದೋ ಅವರ ಕನಸು 10-15 ವರ್ಷಗಳಲ್ಲಿ ನನಸಾಗಬಹುದು. ಇದಕ್ಕಾಗಿ ಜನರನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಸನಾತನ ಧರ್ಮವೆಂದರೆ ಹಿಂದೂ ರಾಷ್ಟ್ರವಲ್ಲದೆ ಬೇರೇನೂ ಅಲ್ಲ, ದೇಶದ ಪ್ರಗತಿಯು ಧರ್ಮದ ಪ್ರಗತಿಯೊಂದಿಗೆ ಸಂಬಂಧ ಹೊಂದಿದೆ. ಧರ್ಮದ ಉದ್ದೇಶವೇ ಭಾರತದ ಉದ್ದೇಶವಾಗಿದ್ದು, ಜನರನ್ನು ಸಬಲೀಕರಣಗೊಳಿಸುವ ಮೂಲಕ ಮಾತ್ರ ಉದ್ದೇಶವನ್ನು ಸಾಧಿಸಬಹುದು. ಇದಕ್ಕೆ ಜನರು ಸಿದ್ಧರಾದಾಗ, ಇತರರ ನಡವಳಿಕೆಯೂ ಅದಕ್ಕೆ ಅನುಗುಣವಾಗಿ ಬದಲಾಗುತ್ತದೆ ಎಂದು ಹೇಳಿದ್ದಾರೆ.

Join Whatsapp
Exit mobile version