ಪಟಿಯಾಲಾ: ಇತ್ತೀಚೆಗೆ ಒಂದು ವರ್ಷ ಕಠಿಣ ಶಿಕ್ಷೆಗೆ ಗುರಿಯಾಗಿರುವ ಪಂಜಾಬ್ ಕಾಂಗ್ರೆಸ್ ಮಾಜಿ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರು ಪಟಿಯಾಲಾ ಕೇಂದ್ರ ಕಾರಾಗೃಹದಲ್ಲಿ ಇನ್ಮುಂದೆ ಗುಮಾಸ್ತರಾಗಿ ಕೆಲಸ ಮಾಡಲಿದ್ದಾರೆ.
58 ವರ್ಷದ ಸಿಧು ಅವರಿಗೆ ಸುದೀರ್ಘ ನ್ಯಾಯಾಲಯದ ತೀರ್ಪುಗಳನ್ನು ಸಂಕ್ಷಿಪ್ತಗೊಳಿಸುವುದು ಮತ್ತು ಜೈಲಿನ ದಾಖಲೆಗಳನ್ನು ಸಂಗ್ರಹಿಸುವುದು ಮುಂತಾದ ಕೆಲಸಗಳನ್ನು ಜೈಲಿನ ಅಧಿಕಾರಿಗಳು ವಹಿಸಿದ್ದಾರೆ ಎನ್ನಲಾಗಿದೆ
ಜೈಲಿನ ನಿಯಮದಂತೆ ಮೊದಲ ಮೂರು ತಿಂಗಳು, ಅಪರಾಧಿಗಳಿಗೆ ವೇತನವಿಲ್ಲದೆ ತರಬೇತಿ ನೀಡಲಾಗುತ್ತದೆ. ಕೌಶಲ್ಯರಹಿತ, ಅರೆ-ಕುಶಲ ಅಥವಾ ನುರಿತ ಖೈದಿ ಹೀಗೆ ಮೂರು ವಿಭಾಗದಲ್ಲಿ ವರ್ಗೀಕರಿಸಿದ ನಂತರ ಅವರಿಗೆ ಪ್ರತಿದಿನ ₹ 30-90 ಪಾವತಿಸಲಾಗುತ್ತಿದ್ದು ವೇತನವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ ಎಂದು ತಿಳಿದು ಬಂದಿವೆ.