Home ಟಾಪ್ ಸುದ್ದಿಗಳು ತ್ರಿವರ್ಣ ಧ್ವಜಕ್ಕೆ ಇದೆಂಥಾ ಅಪಮಾನ: ಧ್ವಜವನ್ನು ನೆಲಕ್ಕೆ ಹಾಸಿ ಇಸ್ಪೀಟ್ ಆಡಿದ ಕಿರಾತಕರು

ತ್ರಿವರ್ಣ ಧ್ವಜಕ್ಕೆ ಇದೆಂಥಾ ಅಪಮಾನ: ಧ್ವಜವನ್ನು ನೆಲಕ್ಕೆ ಹಾಸಿ ಇಸ್ಪೀಟ್ ಆಡಿದ ಕಿರಾತಕರು

►ಉತ್ತರ ಪ್ರದೇಶದಲ್ಲಿ ರಾಷ್ಟ್ರ ಧ್ವಜಕ್ಕೆ ಅವಮಾನ


ಉತ್ತರ ಪ್ರದೇಶ: ತ್ರಿವರ್ಣ ಧ್ವಜಕ್ಕೆ ಸಂಬಂಧಿಸಿದಂತೆ ಕಟ್ಟುನಿಟ್ಟಾದ ಕಾನೂನು ನಿಬಂಧನೆಗಳಿದ್ದು, ರಾಷ್ಟ್ರಗೀತೆ ಮತ್ತು ರಾಷ್ಟ್ರಧ್ವಜವನ್ನು ಗೌರವಿಸದಿದ್ದರೆ ಅದು ಶಿಕ್ಷಾರ್ಹ ಅಪರಾಧವಾಗುತ್ತದೆ. ಇದು ಗೊತ್ತಿದ್ದೂ ಕೂಡಾ ಇಲ್ಲೊಂದಷ್ಟು ಕಿರಾತಕರು ರಾಷ್ಟ್ರ ಧ್ವಜವನ್ನು ನೆಲೆದ ಮೇಲೆ ಹಾಸಿ ಇಸ್ಪೀಟ್ ಆಡುವ ಮೂಲಕ ಅಪಮಾನ ಮಾಡಿದ್ದಾರೆ. ಈ ಸುದ್ದಿ ಎಲ್ಲೆಡೆ ವೈರಲ್ ಆಗುತ್ತಿದೆ.


ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಲಕ್ಷ್ಮಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಯಮುನಾ ನದಿಯ ಸಮೀಪದಲ್ಲಿ ಒಂದಷ್ಟು ಜನ ರಾಷ್ಟ್ರ ಧ್ವಜವನ್ನು ನೆಲಕ್ಕೆ ಹಾಸಿ ಅದರ ಮೇಲೆ ಇಸ್ಪೀಟ್ ಆಡುವ ಮೂಲಕ ಅವಮಾನ ಮಾಡಿದ್ದಾರೆ.


ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ವಿಡಿಯೋ ಆಧರಿಸಿ ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಅಘಾತಕಾರಿ ವಿಷಯವೆಂದರೆ ತ್ರಿವರ್ಣ ಧ್ವಜಕ್ಕೆ ಅವಮಾನ ಮಾಡಿದವರಲ್ಲಿ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ಸೇರಿದ್ದಾರೆ. ಮತ್ತೊಬ್ಬ ವ್ಯಕ್ತಿ ಅಲ್ಲಿನ ವಿದ್ಯುತ್ ಇಲಾಖೆಯ ಎಸ್ ಡಿಒ ಚಾಲಕ. ಉಳಿದ ಇಬ್ಬರು ಸ್ಥಳೀಯರು. ಈ ನಾಲ್ಕು ಜನ ಧ್ವಜವನ್ನು ನೆಲದ ಮೇಲೆ ಹಾಸಿ ಚಪ್ಪಲಿ, ಶೂ ಹಾಕಿಕೊಂಡೇ ಇಸ್ಪೀಟ್ ಆಡುವ ಮೂಲಕ ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿದ್ದಾರೆ. ಈ ನಾಲ್ವರ ವಿರುದ್ಧ ಜಮುನಾಪರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Join Whatsapp
Exit mobile version