Home ಟಾಪ್ ಸುದ್ದಿಗಳು ಶಿವಮೊಗ್ಗ | ಚಲಿಸುತ್ತಿದ್ದ ರೈಲಿನಿಂದ ಬೇರ್ಪಟ್ಟ ಇಂಜಿನ್: ಕೆಲ ಕಾಲ ಆತಂಕದ ವಾತಾವರಣ

ಶಿವಮೊಗ್ಗ | ಚಲಿಸುತ್ತಿದ್ದ ರೈಲಿನಿಂದ ಬೇರ್ಪಟ್ಟ ಇಂಜಿನ್: ಕೆಲ ಕಾಲ ಆತಂಕದ ವಾತಾವರಣ

ಶಿವಮೊಗ್ಗ: ಚಲಿಸುತ್ತಿದ್ದ ತಾಳಗುಪ್ಪ- ಬೆಂಗಳೂರು ಎಕ್ಸ್ ಪ್ರೆಸ್ ರೈಲಿನ ಇಂಜಿನ್ ಕಳಚಿ ಹೋದ ಘಟನೆ ಶಿವಮೊಗ್ಗದ ಬಿದರೆ ಬಳಿ ನಡೆದಿದ್ದು, ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.


ಎಕ್ಸ್ ಪ್ರೆಸ್ ರೈಲು ಶಿವಮೊಗ್ಗ ರೈಲ್ವೆ ನಿಲ್ದಾಣದಿಂದ ಹೊರಟಿದ್ದು, ಶಿವಮೊಗ್ಗ ಸಮೀಪದ ಬಿದರೆ ಬಳಿ ಬರುತ್ತಿದ್ದಂತೆ ಬೋಗಿಗಳಿಂದ ಇಂಜಿನ್ ಬೇರ್ಪಟ್ಟಿದೆ. ಕಪ್ಲಿಂಗ್ ಸಡಿಲಗೊಂಡ ಕಾರಣ ಬೋಗಿಗಳು ಮತ್ತು ಇಂಜಿನ್ ಬೇರೆ ಬೇರೆಯಾಗಿ ಬೋಗಿಗಳ ಬಿಟ್ಟು ಇಂಜಿನ್ ಸ್ವಲ್ಪ ದೂರ ಚಲಿಸಿದೆ.


ಇನ್ನು ಬಿದರೆ ಬಳಿ ಸಮತಟ್ಟಾಗಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ.

Join Whatsapp
Exit mobile version