ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಾದ ಸೋಮವಾರ ತಹಸಿಲ್ದಾರ್ ಮೋಹನ ಕುಮಾರಿ ಅವರು 68 ಜನರಿಗೂ ಏಷಿಯನ್ ಪೈಂಟ್ಸ್ ಕಾರ್ಖಾನೆಯ ನೇಮಕಾತಿ ಪತ್ರಗಳನ್ನು ನೀಡುವುದರೊಂದಿಗೆ ಹಿಮ್ಮಾವು ಕೈಗಾರಿಕಾ ಕೇಂದ್ರದಲ್ಲಿನ ಏಷಿಯನ್ ಪೈಂಟ್ಸ್ ಮುಂಭಾಗದ ಆವರಣದಲ್ಲಿ ಕಳೆದ 106 ದಿನಗಳಿಂದ ನಡೆಯುತ್ತಿರುವ ಹೋರಾಟ ಸುಖಾಂತ್ಯಗೊಂಡಿದೆ.
ಇದೇ ಮೋದಲ ಬಾರಿಗೆ ಹೋರಾಟದ ಸ್ಥಳಕ್ಕೆ ಆಗಮಿಸಿದ ತಹಸಿಲ್ದಾರ್ ಮೋಹನ ಕುಮಾರಿ ಅವರನ್ನು ಪಾನೀಯ ನೀಡಿ ಸ್ವಾಗತಿಸಿದ ಹೋರಾಟಗಾರರು, ಅವರಿಗೆ ಮಹಿಳಾ ದಿನಾಚರಣೆಯ ಶುಭ ಕೋರಿದ್ದಾರೆ.
ನಂತರ ಕಾರ್ಖಾನೆಗಾಗಿ ಭೂಮಿ ಕಳೆದುಕೊಂಡ 68ಜನರನ್ನು ಕರೆದು ಅವರಿಂದ ಉದ್ಯೋಗ ನೇಮಕಾತಿಯ ಕರಾರಿಗೆ ಅಂಕಿತ ಹಾಕಿಸಿಕೊಳ್ಳಲಾಯಿತು.
ಈ ವೇಳೆ ರಾಜ್ಯ ರೈತ ಸಂಘ, ಸ್ವರಾಜ್ ಇಂಡಿಯಾ, ವಿವಿಧ ದಲಿತ ಸಂಘಟನೆಗಳೂ ಸೇರಿದಂತೆ ಹಲವಾರು ಸಂಘಟನೆಗಳ ನಾಯಕರು ಸೇರಿದಂತೆ ರೈತ ಸಂಘದ ನಾಯಕ ಹೊಸಕೋಟೆ ಬಸವರಾಜು, ರೈತ ಸಂಘದ ತಾಲ್ಲೂಕು ಅಧ್ಯಕ್ಷ ಶಿರಮಳ್ಳಿ ಸಿದ್ದಪ್ಪ, ಬೊಕ್ಕಹಳ್ಳಿ ನಂಜುಂಡಸ್ವಾಮಿ, ಹೆಜ್ಚಿಗೆ ಪ್ರಕಾಶ, ಅಶ್ವಥ್‌ರಾಜ್ ಅರಸು, ಪ್ರಸನ್ನ ಗೌಡ, ಚಂದ್ರಶೇಖರ ಮೇಟಿ, ಚಂದ್ರೇಗೌಡ, ಉಗ್ರನರಸಿಂಹೇಗೌಡ, ಮುದ್ದುಕೃಷ್ಣ , ಮರಂಕಯ್ಯ, ಚಿಕ್ಕೀರಮ್ಮ, ಮಂಗಳಮ್ಮ, ನಾಗಮ್ಮ, ಕಮಲಮ್ಮ, ಚಂದ್ರೇಗೌಡ , ಪ್ರಸನ್ನ, ಸಚಿನ್, ಆಕಾಶ ಕುಮಾರ್, ಪ್ರಮೋದ , ಪ್ರೇಮ್‌ರಾಜ್ ಹಾಗೂ ಹಿಮ್ಮಾವು ಗ್ರಾಮದ ಜನತೆ ಭಾಗವಹಿಸಿದ್ದರು.