Home ಟಾಪ್ ಸುದ್ದಿಗಳು ಜನವರಿಯಲ್ಲಿ ಬೊಮ್ಮಾಯಿಯ ಅಧಿಕಾರ ಅಂತ್ಯ | ಶಿವರಾಜ ತಂಗಡಗಿ ಹೊಸ ಬಾಂಬ್

ಜನವರಿಯಲ್ಲಿ ಬೊಮ್ಮಾಯಿಯ ಅಧಿಕಾರ ಅಂತ್ಯ | ಶಿವರಾಜ ತಂಗಡಗಿ ಹೊಸ ಬಾಂಬ್

ಕೊಪ್ಪಳ : ಸಿಎಂ ಬಸವರಾಜ ಬೊಮ್ಮಾಯಿಯವರ ಅಧಿಕಾರ ಜನವರಿ ಅಂತ್ಯಕ್ಕೆ ಕೊನೆಗೊಳ್ಳಲಿದೆ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಹೊಸ ಬಾಂಬ್ ಸಿಡಿಸಿದ್ದಾರೆ. ಜನವರಿ ಅಂತ್ಯಕ್ಕೆ ಸಿಎಂ ಬೊಮ್ಮಾಯಿ ಅಧಿಕಾರ ಹೋಗುತ್ತೆ ಎಂಬುದರ ಬಗ್ಗೆ ಬಹಳ ಸ್ಪಷ್ಟ ಮಾಹಿತಿಗಳು ನಮಗೆ ಬರುತ್ತಿವೆ ಎಂದು ಅವರು ಕೊಪ್ಪಳದಲ್ಲಿ ಹೇಳಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ದೆಹಲಿಯಲ್ಲಿ ಪ್ರಧಾನಿ ಮೋದಿಯನ್ನು ಭೇಟಿಯಾಗಲಿದ್ದು, ಈ ಭೇಟಿಯ ನಡುವೆಯೇ ಈ ಹೇಳಿಕೆ ತೀವ್ರ ಕುತೂಹಲ ಕೆರಳಿಸಿದೆ.

ಮುಂಬರುವ ಒಂದೂವರೆ ವರ್ಷದಲ್ಲಿ ರಾಜ್ಯದಲ್ಲಿ ಇಬ್ಬರು ಸಿಎಂ ಆಗುತ್ತಾರೆ ಎಂದಿದ್ದಾರೆ. ಹಾಲಿ ಮುಖ್ಯಮಂತ್ರಿ ಬದಲಾವಣೆ ನೂರಕ್ಕೆ ನೂರು ಸತ್ಯ. ಬೊಮ್ಮಾಯಿಯವರನ್ನ ಬಿಟ್ಟು ಇನ್ನೂ ಒಬ್ಬರು ಸಿಎಂ ಆಗುತ್ತಾರೆ! ಅವರಿಗೆ ಸಿಂಗಲ್ ಆಗಿ ಆಡಳಿತ ಮಾಡೋದಕ್ಕೆ ಬರಲ್ಲ. ಬಿಜೆಪಿ ಹಿಂದೆ ಮೂವರನ್ನು ಮುಖ್ಯಮಂತ್ರಿ ಮಾಡಿತ್ತು. ಈ ಬಾರಿ ನಾಲ್ವರು ಮುಖ್ಯಮಂತ್ರಿ ಆಗಬಹುದು! ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.

ಆಡಳಿತ ನಡೆಸಲು ಹಾಲಿ ಮುಖ್ಯಮಂತ್ರಿಗಳು ಸಮರ್ಥರಿಲ್ಲ ಎಂದಿರುವ ತಂಗಡಗಿ, ಬಿಟ್ ಕಾಯಿನ್ ಹಗರಣದ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಧಿವೇಶನದಲ್ಲಿ ಮಾತನಾಡುತ್ತಾರೆ. ದೂರು ದಾಖಲಿಸಿದ ಪ್ರತಿಯನ್ನು ಕೊಡಿ ಎಂದು ನಾಯಕರು ಕೇಳುತ್ತಿದ್ದಾರೆ. ಅದರ ಬಗ್ಗೆ ಹೆದರಿಕೆ ಇರುವ ಕಾರಣಕ್ಕೆ ಬಿಜೆಪಿಯವರು ಕೊಡುತ್ತಿಲ್ಲ. ಆರೋಪಿಸುವವರೇ ಸಾಕ್ಷ್ಯ ಕೊಡಬೇಕು ಅಂದ್ರೆ ಸರ್ಕಾರವೇಕೆ? ಎಂದು ತಂಗಡಗಿ ಕಟುವಾಗಿ ಪ್ರಶ್ನಿಸಿದ್ದಾರೆ.

Join Whatsapp
Exit mobile version