ನವದೆಹಲಿ: ಇಪಿಎಫ್ಓ- ಎಂಪ್ಲಾಯ್ಮೆಂಟ್ ಪ್ರಾವಿಡೆಂಟ್ ಫಂಡ್ ಆರ್ಗನೈಜೇಶನ್ 2021-22ಕ್ಕೆ ಮತ್ತೆ ತನ್ನ ಚಂದಾದಾರರಿಗೆ ನೀಡುವ ಬಡ್ಡಿ ದರವನ್ನು ಇಳಿಸಿ 8.01%ಕ್ಕೆ ನಿಲ್ಲಿಸಿದೆ.
8.55% ಇದ್ದ ಬಡ್ಡಿ ದರವು ಕಳೆದ ಕೆಲವು ವರುಷಗಳಿಂದ ತೀರಾ ಕಡಿಮೆಯಾಗಿದೆ. 2020-21ರಲ್ಲಿ ಇಪ್ಫೋ ಬಡ್ಡಿ ದರವನ್ನು 8.05ಕ್ಕೆ ಇಳಿಸಿತ್ತು.
ಭವಿಷ್ಯ ನಿಧಿ ಮತ್ತು ಮಿಸಲೇನಿಯಸ್ ಪ್ರಾವಿಶನ್ ಕಾಯ್ದೆ 1952ರ ಪ್ರಕಾರ ಪ್ರತಿಯೊಬ್ಬ ನೌಕರನಿಗೂ ಭವಿಷ್ಯ ನಿಧಿ ಉಳಿತಾಯ ಅತ್ಯಗತ್ಯ. ನೌಕರನ ಮೂಲ ವೇತನದಲ್ಲಿ 12% ಹಣವನ್ನು ಮುರಿದುಕೊಂಡು ಭವಿಷ್ಯ ನಿಧಿಗೆ ಹಾಕಲಾಗುತ್ತದೆ. ಅಷ್ಟೇ ಮೊತ್ತವನ್ನು ಮಾಲಿಕನು ಸಹ ಆ ನಿಧಿಗೆ ಸೇರಿಸಬೇಕು ಎನ್ನುವುದು ನಿಯಮ.
ತುರ್ತು ಸಮಯದಲ್ಲಿ ನೌಕರನು ಅದರಲ್ಲಿ 35%ದವರೆಗೆ ಸಾಲ ಪಡೆಯಲು ಅವಕಾಶವಿದೆ. ಬಡ್ಡಿಯನ್ನು ಪ್ರತಿ ವರುಷ ನೌಕರನಿಗೆ ನೀಡಬೇಕು.
ಕೊರೋನಾ ಎಂದು 2019- 20ರಲ್ಲಿ ಬಡ್ಡಿ ಕಡಿತ, ಕೆಲವರರಿಗೆ ಎರಡು ಕಂತಿನಲ್ಲಿ ಬಡ್ಡಿ ನೀಡಿಕೆ, ಹಣ ನೀಡದಿರುವುದು ಎಲ್ಲವೂ ನಡೆಯಿತು.
ಇಪ್ಫೋ ಮಂಡಳಿ ಸದಸ್ಯ ವ್ರಜೇಶ್ ಉಪಾಧ್ಯಾಯ ಆವರು ಜನವರಿ 22ರ ಸಭೆಯಲ್ಲೇ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಯಿತು. ಚುನಾವಣೆ ಕಾರಣದಿಂದ ವಿವರ ಕೂಡಲೆ ಹೊರಗಿಡಲಾಗಲಿಲ್ಲ ಎಂದಿದ್ದಾರೆ.
2016-17ರಲ್ಲಿ 8.5%ಕ್ಕೆ ಇಳಿದದ್ದು ಮತ್ತೆ ಇಳಿಯುತ್ತಲೇ ಬಂತು ಎಂದು ತಿಳಿದು ಬಂದಿದೆ.