Home ಟಾಪ್ ಸುದ್ದಿಗಳು ಮದ್ಯ ಕುಡಿದ ಬಳಿಕವೂ ತನಗೆ ಕಿಕ್ ಏರುತ್ತಿಲ್ಲ ಎಂದು ಗೃಹ ಸಚಿವರಿಗೇ ದೂರು ನೀಡಿದ ಕುಡುಕ...

ಮದ್ಯ ಕುಡಿದ ಬಳಿಕವೂ ತನಗೆ ಕಿಕ್ ಏರುತ್ತಿಲ್ಲ ಎಂದು ಗೃಹ ಸಚಿವರಿಗೇ ದೂರು ನೀಡಿದ ಕುಡುಕ !

ಉಜ್ಜೈನಿ: ಮದ್ಯ ಕುಡಿದ ಬಳಿಕವೂ ತನಗೆ ಕಿಕ್ ಏರುತ್ತಿಲ್ಲ, ಇದಕ್ಕೆ ಮದ್ಯದಂಗಡಿಯವನು ಮಾರಾಟ ಮಾಡುತ್ತಿರುವ ಕಲಬೆರಕೆ ಮದ್ಯವೇ ಕಾರಣ ಎಂದು ವ್ಯಕ್ತಿಯೊಬ್ಬರು ಗೃಹ ಸಚಿವರಿಗೇ ಲಿಖಿತ ದೂರು ನೀಡಿರುವ ಪ್ರಸಂಗ ಉಜ್ಜೈನಿಯಲ್ಲಿ ನಡೆದಿದೆ.

ಮಧ್ಯಪ್ರದೇಶದ ಉಜ್ಜೈನಿಯ ಬಹದ್ದೂರ್ ಗಂಜ್ ನಿವಾಸಿ 42 ವರ್ಷದ ಲೋಕೇಶ್ ಸೋಧಿಯಾ ಎಂಬವರೇ ದೂರು ನೀಡಿದ ವ್ಯಕ್ತಿ. ತಾವು ಪ್ರತಿನಿತ್ಯ ಮದ್ಯ ಸೇವಿಸುತ್ತಿದ್ದು, ಅದು ಸರಿಯಾಗಿ ಕಿಕ್ ನೀಡುತ್ತಿಲ್ಲ ಎಂದು ದೂರು ನೀಡಿದ್ದಾರೆ.

 ಏಪ್ರಿಲ್ 12 ರಂದು ತಾವು ಸ್ಥಳೀಯ ಮದ್ಯದಂಗಡಿಯಿಂದ ನಾಲ್ಕು ಕ್ವಾಟರ್ ಬಾಟಲಿ ಮದ್ಯವನ್ನು ಖರೀದಿಸಿದ್ದು ಅದರಲ್ಲಿ ನಾನು ಹಾಗೂ ನನ್ನ ಸ್ನೇಹಿತ ಎರಡು ಬಾಟಲಿಗಳನ್ನು ಕುಡಿದಿದ್ದೆವು, ಇದರಿಂದ ತಮಗೆ ಯಾವುದೇ ರೀತಿಯಲ್ಲಿ ಅಮಲು ಎರಲೇ ಇಲ್ಲ ಎಂದು ದೂರು ನೀಡಿದ್ದಾರೆ.

 ಕಳೆದ ಎರಡು ದಶಕಗಳಿಂದ ನಾನು ಮದ್ಯ ಸೇವಿಸುತ್ತಿದ್ದು, ಅದರ ರಚಿ ಮತ್ತು ಗುಣಮಟ್ಟ ತಮಗೆ ತಿಳಿದಿದೆ ಎಂದು ಹೇಳಿರುವ ಅವರು, ಈ ಸಂಬಂಧ ಪೊಲೀಸ್, ಗ್ರಾಹಕರ ವೇದಿಕೆ, ಗೃಹ ಸಚಿವರಿಗೂ ದೂರು ನೀಡಿದ್ದಾರೆ.

Join Whatsapp
Exit mobile version