Home ಟಾಪ್ ಸುದ್ದಿಗಳು ಮಗುವಿನ ಗಮನ ಬೇರೆಡೆಗೆ ಸೆಳೆದು ಇಂಜೆಕ್ಷನ್ ಚುಚ್ಚಿ ಉಕ್ಕುವ ಕಣ್ಣೀರನ್ನು ಹಾಗೇ ಇಂಗಿಸಿದ ಡಾಕ್ಟರ್

ಮಗುವಿನ ಗಮನ ಬೇರೆಡೆಗೆ ಸೆಳೆದು ಇಂಜೆಕ್ಷನ್ ಚುಚ್ಚಿ ಉಕ್ಕುವ ಕಣ್ಣೀರನ್ನು ಹಾಗೇ ಇಂಗಿಸಿದ ಡಾಕ್ಟರ್

ನವದೆಹಲಿ: ಚುಚ್ಚು ಮದ್ದು ತೆಗೆಯಲು ಮಗುವೊಂದು ಆಸ್ಪತ್ರೆಗೆ ಬಂದಿದ್ದು, ಈ ವೇಳೆ ಡಾಕ್ಟರ್ ಒಬ್ಬರು ಮಗುವಿನ ಗಮನ ಬೇರೆಡೆ ಸೆಳೆದು ಇಂಜೆಕ್ಷನ್ ಚುಚ್ಚಿ ಉಕ್ಕುವ ಕಣ್ಣೀರನ್ನು ಹಾಗೇ ಇಂಗಿಸಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


ಮಕ್ಕಳ ವೈದ್ಯ ಡಾ. ಸೈಯದ್ ಮುಜಾಹಿದ್ ಹುಸೇನ್ ಎಂಬುವವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ವೀಡಿಯೋ ಅನ್ನು ಹಂಚಿಕೊಂಡಿದ್ದಾರೆ. ‘ಆರು ತಿಂಗಳ ಮಗು ಮಾತ್ರ ಅದ್ಭುತ, ನಾವು ದೊಡ್ಡವರು ಅಂಜುಬುರುಕರು’ ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. ಈ ತನಕ ಸುಮಾರು 9.8 ಲಕ್ಷ ಜನರು ಈ ವಿಡಿಯೋ ನೋಡಿದ್ದಾರೆ. ಅನೇಕರು ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ.


ಡಾಕ್ಟರ್ ಆಗಬೇಕೆಂದುಕೊಂಡಿರುವ ನನ್ನ ಅಂಕಲ್ ಮಗಳಿಗೆ ಈ ವಿಡಿಯೋ ತೋರಿಸಿದ್ದೇನೆ. ಈ ವಿಡಿಯೋ ನೋಡಿ ಆಕೆ ಬಹಳ ಸ್ಫೂರ್ತಿಗೊಂಡಿದ್ದಾರೆ. ನಿಮ್ಮಂತೆಯೇ ಆಗಲು ಆಕೆ ಇಚ್ಛಿಸಿದ್ದಾರೆ ಎಂದಿದ್ದಾರೆ.

Join Whatsapp
Exit mobile version