ಭಾರತೀಯರ DNA ಒಂದೇ ಎನ್ನುವವರು ಹಿಂದುತ್ವದ ಪ್ರತಿಪಾದಕರು: ರಾಹುಲ್ ಗಾಂಧಿ

Prasthutha|

ನವದೆಹಲಿ: ಎಲ್ಲಾ ಭಾರತೀಯರ DNA ಒಂದೇ ಎಂದು ಹೇಳಿಕೆ ನೀಡುವವರು ಹಿಂದುತ್ವದ ಪ್ರತಿಪಾದಕರು ಆಗಿದ್ದಾರೆ. ಆದರೆ ದೇಶದ ನೈಜ ಹಿಂದೂಗಳು ಪ್ರತಿಯೊಬ್ಬ ಭಾರತೀಯನ DNA ವಿಶಿಷ್ಟ ಮತ್ತು ವಿಭಿನ್ನ ಎಂದು ನಂಬುತ್ತಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ತಿಳಿಸಿದ್ದಾರೆ.

- Advertisement -

40 ಸಾವಿರ ವರ್ಷಗಳಿಂದ ಎಲ್ಲಾ ಭಾರತೀಯರ DNA ಒಂದೇ ಆಗಿದೆ ಎಂಬ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೇಳಿಕೆಗೆ ಕಾಂಗ್ರೆಸ್ ಮುಖಂಡ ರಾಹುಲ್ ಟ್ವೀಟ್ ಮೂಲಕ ಈ ಮೇಲಿನಂತೆ ತಿರುಗೇಟು ನೀಡಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮೋಹನ್ ಭಾಗವತ್ 40 ಸಾವಿರ ವರ್ಷಗಳಿಂದ ಭಾರತೀಯರ DNA ಒಂದೇ ಆಗಿದ್ದು, ಪೂರ್ವಜರೆಲ್ಲ ನಮ್ಮ ಕುಲದವರು. ಪೂರ್ವಜರಿಂದಾಗಿ ದೇಶ ಅಭಿವೃದ್ಧಿ ಪಥದಲ್ಲಿ ಸಾಗುತ್ತಾ ಸಂಸ್ಕ್ರತಿಯನ್ನು ಉಳಿಸಿದೆ ಎಂದು ತಿಳಿಸಿದ್ದರು. ಈ ಹೇಳಿಕೆಯನ್ನು ವಿರೋಧಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದಾರೆ.

Join Whatsapp