ಇಂಡಿಯಾ ಫ್ರೆಟರ್ನಿಟಿ ಫೋರಂನಿಂದ ‘ದಿ ಡಿಸ್ಟಾನ್ಸ್’ ಸ್ಮರಣಿಕೆ ಬಿಡುಗಡೆ

Prasthutha: April 9, 2021

ದಮ್ಮಾಮ್: ಇಂಡಿಯಾ ಫ್ರೆಟರ್ನಿಟಿ ಫೋರಂ ನ ‘ದಿ ಡಿಸ್ಟಾನ್ಸ್” ಸ್ಮರಣಿಕೆಯನ್ನು ಅಲ್ ಖೊಬರ್ ನ ಸೆಂಟ್ರೊ ರೊಟಾನಾ ಹೊಟೇಲಿನಲ್ಲಿ ಇತ್ತೀಚೆಗೆ ನಡೆದ ವರ್ಣರಂಜಿತ ಸಮಾರಂಭವೊಂದರಲ್ಲಿ ಬಿಡುಗಡೆಗೊಳಿಸಲಾಯಿತು. ಅನಿವಾಸಿ ಭಾರತೀಯ ಸಮುದಾಯದ ಹಲವು ನಾಯಕರು ಹಾಗೂ ಗಣ್ಯರ ಉಪಸ್ಥಿತಿಯಲ್ಲಿ  ಫೋರಂನ ಝೋನಲ್ ಅಧ್ಯಕ್ಷ ಮೂಸಾ ಕುಟ್ಟಿ ಪೂರ್ವ ಪ್ರಾಂತ್ಯದ ದಿಲ್ಲಿ ಸಮುದಾಯದ ಗೌರವಾನ್ವಿತ ನಾಯಕ ಅರ್ಶದ್ ಅನ್ವರ್ ಗೆ ಮ್ಯಾಗಝಿನ್ ನ ಮೊದಲ ಪ್ರತಿ ಹಸ್ತಾಂತರಿಸಿದರು. ಭಾರತೀಯ ರಾಯಭಾರಿ‌ ಕಚೇರಿ‌ ಮಿಶನ್ ರಿಯಾದ್ ನ ಉಪ ಮುಖ್ಯಸ್ಥ ಎನ್.ರಾಮ್ ಪ್ರಸಾದ್ ಮಾರ್ಚ್ 28, 2021ರಂದು ಈ ಸ್ಮರಣಿಕೆಯನ್ನು ಉದ್ಘಾಟಿಸಿದ್ದರು.

‘ದಿ ಡಿಸ್ಟ್ಯಾನ್ಸ್’ ಮ್ಯಾಗಝಿನ್ ನ ಪ್ರಧಾನ ಸಂಪಾದಕ ಮತ್ತು ಪ್ರಿನ್ಸ್ ಸತಾಮ್ ಯುನಿವರ್ಸಿಟಿಯ ಉಪನ್ಯಾಸಕ ವಾದಿ ಅಲ್ ದವಸಿರ್ ವೀಡಿಯೊ ಕಾನ್ಫರೆನ್ಸ್ ಮೂಲಕ ಸಮಾರಂಭವನ್ನುದ್ದೇಶಿಸಿ ಮುಖ್ಯ ಭಾಷಣ ಮಾಡಿದರು.

 ಸಮುದಾಯದ ಸ್ವಯಂಸೇವಕರು ಪ್ರಯತ್ನಗಳ ಅರ್ಹ ರ ಸೇವೆ ಮಾಡಿದ ನಿಸ್ವಾರ್ಥವಾದ ಸ್ಫೂರ್ತಿದಾಯಕ ಘಟನೆಗಳು ಮತ್ತು ಕೋವಿಡ್ ಸಾಂಕ್ರಾಮಿಕ ತಡೆಗಟ್ಟುವುದಕ್ಕಾಗಿ‌ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಿದ ಆರೋಗ್ಯ ವೃತ್ತಿಪರರ ಸಮರ್ಪಣಾ ಸೇವೆಯ ಕುರಿತ ಈ ಸಂಗ್ರಹವನ್ನು ಪ್ರಕಟಿಸಿದ ಉದ್ದೇಶವನ್ನು ಅವರು ವಿವರಿಸಿದರು. ಮ್ಯಾಗಝಿನ್ ಕೋವಿಡ್ ವಾರಿಯರ್ ಗಳ ತ್ಯಾಗಗಳ ಕುರಿತು ಓದುಗರಿಗೆ ನೆನಪಿಸಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು. ಮಾನಸಿಕ ಸಂಬಂಧವನ್ನು ಉಳಿಸಿ ಬೆಳೆಸುತ್ತಾ ದೈಹಿಕ ಅಂತರ ಕಾಪಾಡಿಕೊಳ್ಳಲು ನಮ್ಮ ಮನಸ್ಸನ್ನು ಮರುಹೊಂದಿಸಲು ಇದು ನೆರವಾಗಲಿದೆಯೆಂದು ಅವರು ಆಶಿಸಿದರು.

ಆರೋಗ್ಯ, ಹಣಕಾಸು ಆಡಳಿತ ಮತ್ತು ಮಾಧ್ಯಮ ಕ್ಷೇತ್ರ ಗಳ  ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಡಾ.ನಬೀಲ್ ಅಹ್ಮದ್ (ತಮಿಳುನಾಡು), ಡಾ.ಸಜ್ಜಾದ್ ಪಾಶ (ಬೆಂಗಳೂರು) ಮುಹಮ್ಮದ್ ಅಬ್ದುಲ್‌ ವಾರಿಸ್ (ಹೈದರಾಬಾದ್), ಆಲ್ಬಿನ್ ಜೋಸೆಫ್‌(ಕೇರಳ) ಈ ಸಂದರ್ಭದಲ್ಲಿ ಸ್ಮರಣಿಕೆ ಬಿಡುಗಡೆಗಾಗಿ ಅಭಿನಂದಿಸಿದರು. ಅರ್ಹರನ್ನು ತಲುಪುವ ಫೋರಂನ ಅವಿರತ ಪ್ರಯತ್ನವನ್ನು ಅವರು ಶ್ಲಾಘಿಸಿದರು.

ವ್ಯಾಪಾರ, ಸಮುದಾಯಗಳು ಮತ್ತು ಜೀವನ ಶೈಲಿಯ ಮೇಲೆ ಪರಿಣಾಮ ಬೀರಿದ ಸಾಂಕ್ರಾಮಿಕ  ಘಟ್ಟದಲ್ಲಿ  ನಡೆಸಿದ ಸಾಮಾಜಿಕ ಸೇವೆಯನ್ನು ಫೋರಂ ಮುಂದುವರಿಸಲಿದೆಯೆಂದು ಅವರು ಭರವಸೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡವರು ಮತ್ತು ಅತಿಥಿಗಳಿಗೆ ಅಬ್ದುಲ್ ಸಲಾಂ (ಪ್ರಾದೇಶಿಕ ಕಾರ್ಯದರ್ಶಿ, ಇಂಡಿಯಾ ಫ್ರೆಟರ್ನಿಟಿ ಫೋರಂ) ಧನ್ಯವಾದ ಸಮರ್ಪಿಸುವುದರೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಫೋರಂ ಸಮುದಾಯ ಚಟುವಟಿಕೆಗಳನ್ನು ಮುಂದುವರಿಸಲಿದೆ ಮತ್ತು ಸೌದಿ ಅರೇಬಿಯಾದಲ್ಲಿ ಬಡ ಮತ್ತು ಅರ್ಹರು ಎಲ್ಲೇ ಇದ್ದರೂ ಅವರನ್ನು ಬೆಂಬಲಿಸಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು. ಇಂಡಿಯಾ ಫ್ರೆಟರ್ನಿಟಿ ಫೋರಂನ ಕಾರ್ಯಕಾರಿ ಸಮಿತಿ ಸದಸ್ಯ ಮೀರಾಜ್ ಅಹ್ಮದ್ ಕಾರ್ಯಕ್ರಮವನ್ನು ನಿರೂಪಿಸಿದರು.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!