Home ಟಾಪ್ ಸುದ್ದಿಗಳು ನಿರುದ್ಯೋಗವೆಂಬ ರೋಗ ಸಾಂಕ್ರಾಮಿಕ ರೂಪ ತಾಳಿದೆ: ರಾಹುಲ್ ಕಿಡಿ

ನಿರುದ್ಯೋಗವೆಂಬ ರೋಗ ಸಾಂಕ್ರಾಮಿಕ ರೂಪ ತಾಳಿದೆ: ರಾಹುಲ್ ಕಿಡಿ

ನವದೆಹಲಿ: ‘ನಿರುದ್ಯೋಗ ಎಂಬ ರೋಗ’ವು ದೇಶದಲ್ಲಿ ಸಾಂಕ್ರಮಿಕ ರೂಪ ತಾಳಿದ್ದು, ಬಿಜೆಪಿ ಆಡಳಿತ ಇರುವ ರಾಜ್ಯಗಳು ಅವುಗಳ ಕೇಂದ್ರಸ್ಥಾನಗಳಾಗಿವೆ ಎಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.

ಗುಜರಾತ್ ನ ಭರೂಚ್ ಜಿಲ್ಲೆಯಲ್ಲಿ ಖಾಸಗಿ ಕಂಪನಿಯೊಂದರಲ್ಲಿ 40 ಖಾಲಿ ಹುದ್ದೆಗಳಿಗೆ ನಡೆದ ಸಂದರ್ಶನಕ್ಕೆ 800ಕ್ಕೂ ಅಧಿಕ ಆಕಾಂಕ್ಷಿಗಳು ಆಗಮಿಸಿದ ಪರಿಣಾಮ ಕಾಲ್ತುಳಿತದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಘಟನೆಯನ್ನು ಉಲ್ಲೇಖಿಸಿ ರಾಹುಲ್ ಗಾಂಧಿ ಹೀಗೆ ಹೇಳಿದ್ದಾರೆ.

‘ಸಾಮಾನ್ಯ ಕೆಲಸವೊಂದಕ್ಕೆ ಭಾರತ ಭವಿಷ್ಯವು ಸರತಿ ಸಾಲಿನಲ್ಲಿ ನಿಲ್ಲುತ್ತಿರುವುದು ಮೋದಿಯ ಅಮೃತ ಕಾಲದ ನಿಜಸ್ಥಿತಿ’ ಎಂದು ರಾಹುಲ್ ಗಾಂಧಿ ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.

Join Whatsapp
Exit mobile version