Home ಕರಾವಳಿ ಇಂದು ಬಿಡುಗಡೆಗೆ ಸಿದ್ದವಾಗಿದ್ದ ‘ಪಿಲಿ’ ತುಳು ಚಿತ್ರ ಪ್ರದರ್ಶನಕ್ಕೆ ತಡೆಯಾಜ್ಞೆ ನೀಡಿದ ನ್ಯಾಯಾಲಯ

ಇಂದು ಬಿಡುಗಡೆಗೆ ಸಿದ್ದವಾಗಿದ್ದ ‘ಪಿಲಿ’ ತುಳು ಚಿತ್ರ ಪ್ರದರ್ಶನಕ್ಕೆ ತಡೆಯಾಜ್ಞೆ ನೀಡಿದ ನ್ಯಾಯಾಲಯ

ಉಡುಪಿ : ಕರಾವಳಿಯಾದ್ಯಂತ ಇಂದು ತೆರೆಗೆ ಸಿದ್ದವಾಗಿದ್ದ “ಪಿಲಿ” ತುಳು ಚಿತ್ರ ಥಿಯೇಟರ್‌ಗಳಲ್ಲಿ ಪ್ರದರ್ಶಿಸದಂತೆ ನ್ಯಾಯಾಲಯ ತಡೆ ನೀಡಿದೆ.

ಈ ಚಿತ್ರಕ್ಕೆ 40 ಲಕ್ಷ ಬಂಡವಾಳ ಹೂಡಿದ ನಿರ್ಮಾಪಕ ಮಂಜೀತ್ ನಾಗರಾಜ್ ಅವರನ್ನು ಕಡೆಗಣಿಸಿ ಬೇರೆ ನಿರ್ಮಾಪಕರ ಹೆಸರನ್ನು ಬಳಸಿಕೊಂಡು ಚಿತ್ರ ಬಿಡುಗಡೆಗೆ ಸಿದ್ದತೆ ಮಾಡಿಕೊಂಡಿರುವುದರಿಂದ ಈ ಚಿತ್ರ ಪ್ರದರ್ಶನ ಕಾಣದಂತೆ ತಡೆ ನೀಡುವಂತೆ ನಿರ್ಮಾಪಕ ಮಂಜೀತ್ ನಾಗರಾಜ್ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ಇದೀಗ ನಿರ್ಮಾಪಕ ಮಂದೀಪ್ ಅವರ ಮನವಿ ಪುರಸ್ಕರಿಸಿದ ನ್ಯಾಯಾಲಯವು ಇಂದು ಬಿಡುಗಡೆಗೊಳ್ಳಲಿದ್ದ “ಪಿಲಿ” ಚಿತ್ರದ ಪ್ರದರ್ಶನವನ್ನು ತಡೆ ಹಿಡಿದಿದೆ.

“ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಭರತ್ ಭಂಡಾರಿ ಅವರು ಚಿತ್ರದ ನಿರ್ಮಾಣಕ್ಕಾಗಿ ನನ್ನಿಂದ 40 ಲಕ್ಷ ಬಂಡವಾಳ ಪಡೆದು ಮೊದಲ ಹಂತದ ಚಿತ್ರೀಕರಣ ಮುಗಿದ ಬಳಿಕ ಹಣ ಪಡೆದು ಚಿತ್ರೀಕರಣ ಪೂರ್ಣಗೊಳಿಸಿ ಬಿಡುಗಡೆ ಮಾಡುವುದಾಗಿ ತಿಳಿಸಿದ್ದರು. ಆದರೀಗ ಬೇರೆ ಯಾವುದೋ ನಿರ್ಮಾಪಕರ ಹೆಸರು ಹಾಕಿಕೊಂಡು ಚಿತ್ರ ಬಿಡುಗಡೆ ಮಾಡುತ್ತಿದ್ದಾರೆ. ಈ ಮೂಲಕ ನನಗೂ ಹಾಗೂ ಹಣ ನೀಡಿದ ಇತರ ಸಹನಿರ್ಮಾಪಕರಿಗೂ ವಂಚಿಸಿದ್ದಾರೆ” ಎಂದು ನಿರ್ಮಾಪಕ ಮಂಜೀತ್ ನಾಗರಾಜ್ ಅವರು ಆರೋಪಿಸಿದ್ದಾರೆ.

‘ಪಿಲಿ’ ಚಿತ್ರ ಪ್ರದರ್ಶನ ಮಾಡದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವುದಾಗಿ ಅವರು ತಿಳಿಸಿದ್ದಾರೆ.

Join Whatsapp
Exit mobile version