Home ಟಾಪ್ ಸುದ್ದಿಗಳು ದೇಶಕ್ಕೆ ಈಗ ಹೊಸ ರಾಜಕೀಯ ತಂತ್ರಗಾರಿಕೆಯ ಅಗತ್ಯವೇ ಹೊರತು, ಪರ್ಯಾಯ ರಾಜಕೀಯ ಒಕ್ಕೂಟ ಅಲ್ಲ: ಕೆ.ಚಂದ್ರಶೇಖರ...

ದೇಶಕ್ಕೆ ಈಗ ಹೊಸ ರಾಜಕೀಯ ತಂತ್ರಗಾರಿಕೆಯ ಅಗತ್ಯವೇ ಹೊರತು, ಪರ್ಯಾಯ ರಾಜಕೀಯ ಒಕ್ಕೂಟ ಅಲ್ಲ: ಕೆ.ಚಂದ್ರಶೇಖರ ರಾವ್

ಹೈದರಾಬಾದ್: ದೇಶಕ್ಕೆ ಹೊಸ ರೀತಿಯ ಪರ್ಯಾಯ ರಾಜಕೀಯ ತಂತ್ರಗಾರಿಕೆ ಬೇಕಾಗಿದೆಯೇ ಹೊರತು, ಹೊಸ ರಾಜಕೀಯ ಮೈತ್ರಿಕೂಟ ಅಲ್ಲ  ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಹೇಳಿದರು.

ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷದ 21ನೇ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ  ಅವರು , ಭಾರತ ರಾಷ್ಟ್ರ ಸಮಿತಿ ಎಂಬ ಹೊಸ ವೇದಿಕೆ ರಚಿಸಲು ಸಲಹೆಗಳು ಬರುತ್ತಿವೆ. ನಂತರ ಅದನ್ನೇ ರಾಷ್ಟ್ರೀಯ ಪಕ್ಷವನ್ನಾಗಿ ಮಾರ್ಪಾಡು ಮಾಡಬೇಕು ಎಂಬ ಬೇಡಿಕೆಗಳೂ ವ್ಯಕ್ತವಾಗಿವೆ. ದೇಶಕ್ಕೆ ಈಗ ಹೊಸ ರಾಜಕೀಯ ತಂತ್ರಗಾರಿಕೆಯ ಅಗತ್ಯವೇ ಹೊರತು, ಪರ್ಯಾಯ ರಾಜಕೀಯ ಒಕ್ಕೂಟ ಅಲ್ಲ’ ಎಂದು ಹೇಳಿದ್ದಾರೆ.

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರವನ್ನು ಕಿತ್ತೂಗೆಯಬೇಕು ಎಂದು ಎಡಪಕ್ಷಗಳು ಪ್ರಸ್ತಾಪಿಸಿದ್ದವು. ಆದರೆ, ಅದನ್ನು ತಿರಸ್ಕರಿಸಿ, ಕೇವಲ ಜನರ ಅಭಿವೃದ್ಧಿಯೇ ತಮ್ಮ ಆದ್ಯತೆ ಎಂದು ಆ ಪಕ್ಷದ ಮುಖಂಡರಿಗೆ ತಿಳಿಸಿದ್ದಾಗಿ ಕಾರ್ಯಕ್ರಮದಲ್ಲಿ ಅವರು ಪ್ರಸ್ತಾಪಿಸಿದರು.

Join Whatsapp
Exit mobile version