Home ಟಾಪ್ ಸುದ್ದಿಗಳು ಕಾಂಗ್ರೆಸ್ ಈಗ ಕಾಂಗ್ರೆಸ್ಸಾಗಿ ಉಳಿದಿಲ್ಲ; ಭ್ರಷ್ಟಾಚಾರ, ಕೋರ್ಟ್ ಕೇಸ್ ಗಳು ಹೆಚ್ಚಾಗಿವೆ: ಸಿ ಎಂ ಇಬ್ರಾಹಿಂ

ಕಾಂಗ್ರೆಸ್ ಈಗ ಕಾಂಗ್ರೆಸ್ಸಾಗಿ ಉಳಿದಿಲ್ಲ; ಭ್ರಷ್ಟಾಚಾರ, ಕೋರ್ಟ್ ಕೇಸ್ ಗಳು ಹೆಚ್ಚಾಗಿವೆ: ಸಿ ಎಂ ಇಬ್ರಾಹಿಂ

ಬೆಂಗಳೂರು: ನಾನು ಯಾವತ್ತೂ ಜಾತಿ ರಾಜಕಾರಣ ಮಾಡಿದವನಲ್ಲ. ನಾನು ಯಾವತ್ತೂ ಅಲ್ಪಸಂಖ್ಯಾತರಿಗೆ ನಾಯಕ ಎಂದು ಹೇಳಿಕೊಂಡವನಲ್ಲ. ನಾನು ಈ ರಾಜ್ಯದ ಜನತೆಯ ಸೇವಕ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ವ ಜನಾಂಗದ ಶಾಂತಿಯ ತೋಟ ಇದು, ಸರ್ವಧರ್ಮದ ಬೀಡು ಇದು, ಸರ್ವರಿಗೂ ಸಮಪಾಲು; ಸರ್ವರಿಗೂ ಸಮಬಾಳು ಸಿಗಬೇಕು. ಇದು ಬಸವಣ್ಣ, ಸರ್ವಜ್ಞನ ನಾಡು. ಹಾಗಾಗಿ, ಜಾತಿ-ಮತ, ಪಂಥಗಳ ಭೇದಭಾವ ಬಿಟ್ಟು ರಾಜಕಾರಣ ಮಾಡುವ ರಾಜಕಾರಣಿಗಳ ಪೈಕಿ ನಾನೂ ಒಬ್ಬ. ಈಗ ಹೋರಾಟದ ಸಮಯ. ಹೋರಾಟ ಕರ್ನಾಟಕದ ಪರಂಪರೆ, ಈ ಮಣ್ಣಿನ ಗುಣ. ಪಾಪದ ಕೆಲಸವನ್ನು ಕರ್ನಾಟಕ ಜನ ಯಾವತ್ತೂ ಸಹಿಸುವುದಿಲ್ಲ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಈಗ ಕಾಂಗ್ರೆಸ್ ಆಗಿ ಉಳಿದಿಲ್ಲ, ದುಡ್ಡು, ಕೋರ್ಟ್ ಕೇಸ್ಗಳು, ಭ್ರಷ್ಟಾಚಾರ, ಪರ್ಸಂಟೇಜ್ ಇದೇ ಪಕ್ಷದಲ್ಲಿ ಹೆಚ್ಚಾಗಿದೆ. ಇಂತಹವರನ್ನು ಜೊತೆಗೆ ಕೂರಿಸಿಕೊಂಡು ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಮಾತನಾಡಬೇಕಾ? ಜನತಾ ದಳ ಹಾಗಲ್ಲ. ದೇವೇಗೌಡರ ಬಳಿ ನಾಲ್ಕು ಪಂಚೆ, ಜುಬ್ಟಾ ಬಿಟ್ಟರೆ ಬೇರೇನೂ ಇಲ್ಲ. ಇಂತಹವರ ಜತೆಗಿರಬೇಕಾ? ಅಥವಾ ಇಡಿ, ಐಟಿ ರೈಡ್ ಮಾಡಿಸಿಕೊಂಡವರ ಜೊತೆಗೆ ಇರಬೇಕಿತ್ತಾ? ಎಂದು ಕಾಂಗ್ರೆಸ್ ಪಕ್ಷವನ್ನು ಲೇವಡಿ ಮಾಡಿದರು.

Join Whatsapp
Exit mobile version