ಸರ್ಕಾರಿ ಸಂಸ್ಥೆಗಳ ದುರುಪಯೋಗ ಮಾಡಿ ಜನರನ್ನು ವಂಚಿಸುತ್ತಿರುವ ಕೇಂದ್ರ ಸರ್ಕಾರ; ನ್ಯಾಯಾಂಗ ಮಧ್ಯೆ ಪ್ರವೇಶಿಸಲಿ: APCR

Prasthutha|

ಉಡುಪಿ: ಸರ್ಕಾರಿ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡು  ಕೋಮುವಾದಿ ಧೋರಣೆಯಿಂದ ಪಕ್ಷಪಾತೀಯ ನಿಲುವು  ತಾಳಿ PFI  ಸಂಘಟನೆ ಹಾಗೂ ರಾಜಕೀಯ ಪಕ್ಷವಾಗಿರುವ  SDPIಯ  ನಾಯಕರುಗಳ ಬಂಧನ ಮಾಡಿ ಈ ದೇಶದ ಸಂವಿಧಾನಕ್ಕೆ  ಅಪಚಾರವೆಸಗುವ ಕೆಲಸವನ್ನು ಇಂದು  ಕೇಂದ್ರ ಸರ್ಕಾರ ಮಾಡುತ್ತಿರುವುದು ಖಂಡನೀಯವಾಗಿದೆ ಎಂದು ಎಪಿಸಿಆರ್ ನ ಉಡುಪಿ ಜಿಲ್ಲಾ ಘಟಕದ  ಸಂಚಾಲಕ ಹುಸೇನ್ ಕೋಡಿಬೆಂಗ್ರೆ ಹೇಳಿದ್ದಾರೆ.

- Advertisement -

ಈ ಬಗ್ಗೆ ಪ್ರತಿಕ್ರಿಸಿರುವ ಅವರು, ಯಾವುದೇ ತನಿಖೆ ನಡೆಸಿ ಸೂಕ್ತ  ಸಾಕ್ಷ್ಯಧಾರ ಇಲ್ಲದೆ ಸುಮ್ಮನೆ ಬಂಧನ ಮಾಡಿರುವುದು ಈ ದೇಶದ ಕಾನೂನು ವ್ಯವಸ್ಥೆಗೆ ಮಾಡಿರುವ ಅಪಚಾರವಾಗಿದೆ. ಇದೇ ರೀತಿ ಮುಂದುವರೆದರೆ ಈ ದೇಶದ ಸಾಂವಿಧಾನಿಕ ಸಂಸ್ಥೆಗಳಿಗೆ ಯಾವುದೇ ರೀತಿಯ ಮೌಲ್ಯವಿಲ್ಲದೆ, ರಾಜಕೀಯದ ಗೂಂಡಾಯಿಸಂನ  ಬಲಿಪಶು ಆಗುವುದರಲ್ಲಿ ಯಾವುದೇ ರೀತಿಯ ಸಂಶಯವಿಲ್ಲದಂತಾಗಲಿದೆ ಎಮದು ಹೇಳಿದರು.

ಯಾವುದೇ ಸಂಘಟನೆ – ಪಕ್ಷಗಳಾದರೂ ಅದಕ್ಕೆ ತನ್ನದೇ ಆದ ನಿಲುವು ಇದ್ದು ಅದರ ಬಗ್ಗೆ ಭಿನ್ನಾಭಿಪ್ರಾಯಗಳು ಸರ್ವೇ ಸಾಮಾನ್ಯ. ಹಾಗೆಂದು ಸಾಂವಿಧಾನಿಕ ಸಂಘಟನಾ ಸ್ವಾತಂತ್ರ್ಯವನ್ನು ಹತ್ತಿಕ್ಕುವುದು ಭಾರತದ ಪ್ರಜಾಪ್ರಭುತ್ವಕ್ಕೆ ಮಾಡುತ್ತಿರುವ ಅಪಮಾನ. ಆದ್ದರಿಂದ ಇಂತಹ ಅರಾಜಕತೆಯನ್ನು ತಕ್ಷಣ ನಿಲ್ಲಿಸಬೇಕೆಂದು ಎಪಿಸಿಆರ್ ನ ಉಡುಪಿ ಜಿಲ್ಲಾ ಘಟಕ ಆಗ್ರಹಿಸುತ್ತದೆ ಎಂದು ಹುಸೇನ್ ಕೋಡಿಬೆಂಗ್ರೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ .

Join Whatsapp