Home ಗಲ್ಫ್ ಉಮ್ರಾ ಯಾತ್ರಾರ್ಥಿಗಳು ಪ್ರಯಾಣಿಸುತ್ತಿದ್ದ ಬಸ್ ಪಲ್ಟಿ| ಮಹಿಳೆ ಮೃತ್ಯು; 41 ಮಂದಿಗೆ ಗಾಯ


ಉಮ್ರಾ ಯಾತ್ರಾರ್ಥಿಗಳು ಪ್ರಯಾಣಿಸುತ್ತಿದ್ದ ಬಸ್ ಪಲ್ಟಿ| ಮಹಿಳೆ ಮೃತ್ಯು; 41 ಮಂದಿಗೆ ಗಾಯ

ತಾಯಿಫ್:  ಉಮ್ರಾ ಯಾತ್ರಾರ್ಥಿಗಳು ಸಂಚರಿಸುತ್ತಿದ್ದ ಬಸ್ ಪಲ್ಟಿಯಾಗಿ ಮಹಿಳೆಯೋರ್ವರು ಮೃತಪಟ್ಟಿದ್ದು, 41 ಮಂದಿ ಗಾಯಗೊಂಡ ಘಟನೆ  ಮಕ್ಕಾ ಸಮೀಪದ ತಾಯಿಫ್‌ನ ಅಲ್‌ಝೈಲ್ ರಸ್ತೆಯಲ್ಲಿ ನಡೆದಿದೆ.

ಅಪಘಾತದಲ್ಲಿ ಓರ್ವ ಮಹಿಳೆ ಮೃತಪಟ್ಟಿದ್ದು, 41 ಮಂದಿ ಗಾಯಗೊಂಡಿದ್ದಾರೆ. ಅದರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ.

ವಿವಿಧ ದೇಶಗಳ ಯಾತ್ರಾರ್ಥಿಗಳು ಉಮ್ರಾ ನಿರ್ವಹಿಸಿ ಮಕ್ಕಾದಿಂದ ಹಿಂತಿರುಗುತ್ತಿದ್ದರು. ಅಪಘಾತ ನಡೆದ ಕೂಡಲೇ ಸಂಬಂಧಪಟ್ಟ ಇಲಾಖೆಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಅಪಘಾತದಲ್ಲಿ ಮೃತಪಟ್ಟ ಮಹಿಳೆಯ ಯಾವ ರಾಷ್ಟ್ರದವರೆಂದು ತಿಳಿದುಬಂದಿಲ್ಲ.

.

Join Whatsapp
Exit mobile version