ಕಾಂಗ್ರೆಸ್ಸಿನಲ್ಲಿ ಮುಂದಿನ ಅಲ್ಪಸಂಖ್ಯಾತ ಮುಖ್ಯಮಂತ್ರಿ ಬಗ್ಗೆ ಬಿಜೆಪಿಗರೇ ಮಾತನಾಡುತ್ತಿದ್ದಾರೆ : ಯುಟಿ ಖಾದರ್

Prasthutha|

“ಜನ ಸಾಮಾನ್ಯರು ಬಿಜೆಪಿಯಿಂದ ಬೇಸತಿದ್ದಾರೆ”

- Advertisement -

ಮಂಗಳೂರು: ಜನ ಸಾಮಾನ್ಯರು ಬಿಜೆಪಿಯಿಂದ ಬೇಸತ್ತಿದ್ದು, ಬಿಜೆಪಿಯ ಮುಖಂಡರಿಗೆ ಈ ಬಗ್ಗೆ ಸ್ಪಷ್ಟವಾಗಿರುವುದರಿಂದ ಕಾಂಗ್ರೆಸ್ಸಿನಲ್ಲಿ ಅಲ್ಪಸಂಖ್ಯಾತ ಮುಖ್ಯಮಂತ್ರಿ ಬಗ್ಗೆ ಬಿಜೆಪಿಗರೇ ಮಾತನಾಡುತ್ತಿದ್ದಾರೆ ಎಂದು ಮಾಜಿ ಸಚಿವ ಯು.ಟಿ ಖಾದರ್ ಹೇಳಿದ್ದಾರೆ.

 ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ. ಬಿಜೆಪಿಗೆ ಮತ್ತು ಪಕ್ಷದ ಮುಖಂಡರಿಗೆ ಈ ಬಗ್ಗೆ ಸ್ಪಷ್ಟವಾಗಿದ್ದು, ಬಿಜೆಪಿ ನಾಯಕರಿಗೆ ಬಿಜೆಪಿ ದುರಾಡಳಿದ ಬಗ್ಗೆ ಅಸಮಾಧಾನವಿದೆ. ಜನ ಸಮಾನ್ಯರೂ ಬಿಜೆಪಿಯಿಂದ ಬೇಸತ್ತು ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಅವರು ಹೇಳಿದ್ದಾರೆ.

- Advertisement -

ಈ ಸರ್ಕಾರದ ಬಗ್ಗೆ ಜನರ ಭಾವನೆ ಬಿಜೆಪಿ ನಾಯಕರಿಗೂ ಗೊತ್ತಾಗಿದ್ದು, ಎಲ್ಲಾ ರಂಗದಲ್ಲೂ ಬಿಜೆಪಿ ವೈಫಲ್ಯ ಜನರಿಗೆ ಮತ್ತು ಮುಖಂಡರಿಗೆ ಗೊತ್ತಾಗಿದೆ. ಅಲ್ಪಸಂಖ್ಯಾತರಿಗೆ ಸಿಎಂ ಸ್ಥಾನ ನೀಡುವ ಬಗ್ಗೆ ಬಿಜೆಪಿ ನಾಯಕರೇ ಹೇಳುತ್ತಿದ್ದು, ಮುಂದೆ ಕಾಂಗ್ರೆಸ್ ನಾಯಕರೇ ಸಿಎಂ ಆಗಿ ಬರ್ತಾರೆ. ಆದರೆ ನಾನು ಸದ್ಯಕ್ಕೆ ಸಿಎಂ ಆಗುವ ಬಗ್ಗೆ ಯೋಚನೆ ಮಾಡಲಿಲ್ಲ ಎಂದು ಅವರು ಹೇಳಿದ್ದಾರೆ.

ರಾಜ್ಯ ಸರಕಾರದ ವೈಫಲ್ಯಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಬಡವರ ಬಿಪಿಎಲ್ ಕಾರ್ಡ್ ರದ್ದು ಮಾಡಿದೆ. ಈ ಸರ್ಕಾರ ಬಿಪಿಎಲ್ ಕಾರ್ಡ್ ವಿತರಿಸುವ ಕಾರ್ಯ ಬಿಟ್ಟು ರದ್ದಿಗೆ ಮುಂದಾಗಿದೆ. ಅಧಿಕಾರಿಗಳನ್ನು ಕೇಳಿದ್ರೆ ಬ್ಯಾಂಕ್ ಲೋನ್ ಗೆ ಅರ್ಜಿ ಹಾಕಿದ ಕಾರಣ ಎಪಿಎಲ್ ಆಗಿದೆ ಎನ್ನುತ್ತಾರೆ. ‌ಸರ್ಕಾರವು ಜನ ಸಾಮಾನ್ಯರಿಗೆ ಕೊವಿಡ್ ಸಮಯದಲ್ಲಿ ನೆರವಾಗುದು ಬಿಟ್ಟು ಅವರಿಂದ ಕಿತ್ತುಕೊಳ್ಳುವ ಕಾರ್ಯ ಮಾಡಿದೆ ಎಂದು ಕಿಡಿಕಾರಿದ್ದಾರೆ.

ಈ ಬಗ್ಗೆ ಮಂಗಳೂರು ಕ್ಷೇತ್ರದಲ್ಲಿ ಜನರ ಸಮಸ್ಯೆ ಪರಿಹಾರಕ್ಕಾಗಿ ಜುಲೈ 7ರಂದು ಆಹಾರ ಅದಾಲತ್ ನಡೆಸಲಾಗುವುದು. ಬಿಪಿಎಲ್ ಕಾರ್ಡ್ ಎಪಿಎಲ್ ಪರಿವರ್ತನೆ ಆಗಿದ್ರೆ ಈ ಅದಾಲತ್ ನಲ್ಲಿ ಪರಿಹಾರ ನೀಡಲಾಗುವುದು. ಇದರ ಸದುಪಯೋಗ ಪಡೆಯುವಂತೆ ಸಾರ್ವಜನಿಕರಿಗೆ ಯು.ಟಿ ಖಾದರ್ ಮನವಿ ಮಾಡಿದ್ದಾರೆ.

Join Whatsapp