Home ಟಾಪ್ ಸುದ್ದಿಗಳು ಬಿಜೆಪಿಯು ‘ದಿ ಕಾಶ್ಮೀರ್ ಫೈಲ್ಸ್’ ಮೂಲಕ ದ್ವೇಷ ಹರಡುತ್ತಿದೆ: ಶರದ್ ಪವಾರ್

ಬಿಜೆಪಿಯು ‘ದಿ ಕಾಶ್ಮೀರ್ ಫೈಲ್ಸ್’ ಮೂಲಕ ದ್ವೇಷ ಹರಡುತ್ತಿದೆ: ಶರದ್ ಪವಾರ್

ನವದೆಹಲಿ: ಬಿಜೆಪಿಯು ‘ದಿ ಕಾಶ್ಮೀರ್ ಫೈಲ್ಸ್ ‘ ಸಿನಿಮಾ ಮೂಲಕ ಕಣಿವೆ ಪ್ರದೇಶದಿಂದ ವಲಸೆ ಹೋದ ಕಾಶ್ಮೀರಿ ಪಂಡಿತರ ಬಗ್ಗೆ ಬಿಜೆಪಿ ಅಪ ಪ್ರಚಾರ ಹರಡುವುದರೊಂದಿಗೆ ದೇಶಾದ್ಯಂತ ದ್ವೇಷ ಹರಡುತ್ತಿದೆ ಎಂದು ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ.

ಎನ್ ಸಿಪಿ ದೆಹಲಿ ಅಲ್ಪಸಂಖ್ಯಾತ ವಿಭಾಗದ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಶರದ್ ಪವಾರ್ , ಇಂತಹ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನೀಡಬಾರದಿತ್ತು. ಆದರೆ, ತೆರಿಗೆ ವಿನಾಯಿತಿ ನೀಡಲಾಗುತ್ತಿದೆ. ದೇಶದ ಏಕತೆ ಕಾಪಾಡಲು ಜವಾಬ್ದಾರರಾಗಬೇಕಾದವರು ಈ ಸಿನಿಮಾ ವೀಕ್ಷಿಸುವಂತೆ ಪ್ರೋತ್ಸಾಹಿಸುವ ಮೂಲಕ ಜನರಲ್ಲಿ ಆಕ್ರೋಶ ಉಂಟು ಮಾಡುತ್ತಿದ್ದಾರೆ ಎಂದು ಹೇಳಿದರು. 

Join Whatsapp
Exit mobile version