Home ಟಾಪ್ ಸುದ್ದಿಗಳು ATM ಯಂತ್ರವನ್ನು ಕತ್ತರಿಸಿ 20 ಲಕ್ಷ ರೂ. ದರೋಡೆ

ATM ಯಂತ್ರವನ್ನು ಕತ್ತರಿಸಿ 20 ಲಕ್ಷ ರೂ. ದರೋಡೆ

ಮಂಡ್ಯ : ಎಟಿಎಂ  ಯಂತ್ರವನ್ನು ಕತ್ತರಿಸಿ  20 ಲಕ್ಷ ರೂ. ದರೋಡೆ ಮಾಡಿರುವ ಘಟನೆ ಮದ್ದೂರು ಪಟ್ಟಣದಲ್ಲಿ ನಡೆದಿದೆ.

ಮದ್ದೂರು ಮೆಡಿಕಲ್ ಸೆಂಟರ್ ಬಳಿ ಇರುವ ಎಸ್.ಬಿ.ಐ. ಎಟಿಎಂ ಕೇಂದ್ರಕ್ಕೆ ರಾತ್ರಿ ನುಗ್ಗಿರುವ ದರೋಡೆಕೋರರು ಮೊದಲು ಸಿ‌ಸಿ ಕ್ಯಾಮೆರಾಕ್ಕೆ ಹಾನಿ ಮಾಡಿ, ನಂತರ ಗ್ಯಾಸ್ ಕಟ್ಟರ್ ನಿಂದ ಯಂತ್ರವನ್ನು ಕತ್ತರಿಸಿ  ಹಣವನ್ನು ತುಂಬಿಕೊಂಡು ಪರಾರಿಯಾಗಿದ್ದಾರೆ.

ಇಂದು ಬೆಳಗ್ಗೆ ಎಟಿಎಂ ಕೇಂದ್ರವನ್ನು ಸ್ವಚ್ಛಗೊಳಿಸಲು ಸಿಬ್ಬಂದಿ ಆಗಮಿಸಿದಾಗ  ಕಳ್ಳತನವಾಗಿರುವ ಬಗ್ಗೆ ತಿಳಿದು ಬಂದಿದೆ. ಈ ಕುರಿತು ಮದ್ದೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.

Join Whatsapp
Exit mobile version