Home ಟಾಪ್ ಸುದ್ದಿಗಳು ಹಿಜಾಬ್ ನಿಷೇಧ: ಹೈಕೋರ್ಟ್ ನಲ್ಲಿ ವಾದ-ವಿವಾದ ಹೀಗಿದೆ…

ಹಿಜಾಬ್ ನಿಷೇಧ: ಹೈಕೋರ್ಟ್ ನಲ್ಲಿ ವಾದ-ವಿವಾದ ಹೀಗಿದೆ…

ಬೆಂಗಳೂರು: ಹಿಜಾಬ್‌ ನಿಷೇಧ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಹೈಕೋರ್ಟ್ ನ ತ್ರಿಸದ್ಯ ಪೀಠ  ಆರನೇ ದಿನವಾದ ಇಂದು ವಿಚಾರಣೆ ಕೈಗೆತ್ತಿಕೊಂಡಿತು.

ಸಿಜೆ ಅವಸ್ಥಿ: ಎಲ್ಲಾ ಪ್ರಮುಖ ವಿಚಾರಗಳನ್ನು ಹೇಳಲಾಗಿದೆ. ಉಳಿದ ಅರ್ಜಿದಾರರು ಹತ್ತು ನಿಮಿಷಗಳಲ್ಲಿ ವಾದ ಪೂರ್ಣಗೊಳಿಸಬೇಕು. ಹೀಗಾದರೆ, ಪ್ರತಿವಾದಿಗಳನ್ನು ಆಲಿಸಬಹುದು.

ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್‌: ಮಧ್ಯಂತರ ಮನವಿಗೆ ರಾಜ್ಯ ಸರ್ಕಾರ ಪ್ರತಿಕ್ರಿಯಿಸಬೇಕು. ಇಂದು ರಿಜಿಸ್ಟ್ರಿಯಲ್ಲಿ ಪ್ರತಿಕ್ರಿಯೆ ದಾಖಲಿಸಲಾಗುವುದು ಎಂದ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ. ದುಪ್ಪಟದ ಮೂಲಕ ತಲೆ ಮುಚ್ಚಿಕೊಳ್ಳಲು ಕೋರಿ ಮನವಿ ಸಲ್ಲಿಸಲಾಗಿದೆ.

ಪ್ರೊ. ಕುಮಾರ್‌: ಮಕ್ಕಳಿಗೆ ತೀರ ಸಮಸ್ಯೆಯಾಗುತ್ತಿರುವುದರಿಂದ ಕಲಾಪದ ಲೈವ್‌ಸ್ಟ್ರೀಮ್‌ ಅಮಾನತು ಮಾಡಬೇಕು. ಎಜಿ ನಾವದಗಿ: ಅರ್ಜಿದಾರರು ಈಗಾಗಲೇ ವಾದ ಮಂಡಿಸಿದ್ದಾರೆ.

ಸಿಜೆ ಅವಸ್ಥಿ: ಪ್ರತಿವಾದಿಗಳ ನಿಲುವನ್ನು ಜನರು ಆಲಿಸಲಿ. ಎಜಿ ನಾವದಗಿ: ಹೌದು.

ವಕೀಲ ಸಿರಾಜುದ್ದೀನ್‌ ಅಹ್ಮದ್‌ ಅವರಿಂದ ವಾದ ಮಂಡನೆ. ಸಿಜೆ ಅವಸ್ಥಿ: ಕೆಲವು ಸಮಾಜಘಾತುಕ ಶಕ್ತಿಗಳು ಹಿಜಾಬ್‌ ಧರಿಸದಂತೆ ನಿರ್ಬಂಧ ವಿಧಿಸುತ್ತಿವೆ ಎನ್ನುತ್ತಿದ್ದೀರಿ. ಅಂಥವರ ವಿರುದ್ಧ ನೀವು ಎಫ್‌ಐಆರ್‌ ದಾಖಲಿಸಬೇಕು.

ಅಹ್ಮದ್‌: ಶಾಲಾ ಆಡಳಿತ ಮಂಡಳಿಯು ಹಿಜಾಬ್‌ ಧರಿಸಲು ಬಿಡುತ್ತಿಲ್ಲ. ಈ ಸಮಸ್ಯೆ ಆರಂಭವಾಗುವುದಕ್ಕೂ ಮುನ್ನ ಅವರು ಅನುಮತಿಸಿದ್ದರು. ಸಿಜೆ ಅವಸ್ಥಿ: ಆದರೆ, ನಿಮ್ಮ ಮನವಿ ಅದಲ್ಲ. ನೀವು ಮನವಿಯಲ್ಲಿ ಏನಿದೆ ಅದನ್ನು ಹೇಳುತ್ತಿಲ್ಲ.

ಅಹ್ಮದ್‌: ಮನವಿಯನ್ನು ತಿದ್ದುಪಡಿ ಮಾಡಲು ನಾನು ಮಧ್ಯಪ್ರವೇಶ ಮನವಿ ಸಲ್ಲಿಸಿರುವೆ.

ರಾಜ್ಯ ಅಲ್ಪಸಂಖ್ಯಾತ ಶೈಕ್ಷಣಿಕ ಸಂಸ್ಥೆಗಳ ನಿರ್ವಹಣಾ ಒಕ್ಕೂಟದ ಪರವಾಗಿ ವಾದಿಸಿದ ವಕೀಲ ಜಿ ಆರ್‌ ಮೋಹನ್.‌ ಸಿಜೆ ಅವಸ್ಥಿ: ಇದು ನೋಂದಾಯಿತ ಸಂಸ್ಥೆಯೇ? ಜಿ ಆರ್‌ ಮೋಹನ್‌: ಹೌದು. 2006-07ರಲ್ಲಿ ಇದನ್ನು ನೋಂದಾಯಿಸಲಾಗಿದೆ.

ಅಗತ್ಯ ದಾಖಲೆ ಸಲ್ಲಿಸಲು ಸಮಯಾವಕಾಶ ನೀಡಿದ ಪೀಠ.

ಪ್ರತಿವಾದಿ ರಾಜ್ಯ ಸರ್ಕಾರದ ಪರ ವಾದ ಆರಂಭಿಸಿದ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ.

ಎಜಿ ನಾವದಗಿ: ನನಗೆ ತಿಳಿದಿರುವ ಹಾಗೆ ವಿವಾದ ಮೂರು ವಿಭಾಗಗಳನ್ನು ಹೊಂದಿದೆ. ಮೊದಲಿಗೆ, ಫೆಬ್ರವರಿ ೫ರ ಸರ್ಕಾರದ ಆದೇಶವನ್ನು ಪ್ರಶ್ನಿಸಲಾಗಿದೆ. ಸರ್ಕಾರದ ಆದೇಶವನ್ನು ಕರ್ನಾಟಕ ಶಿಕ್ಷಣ ಕಾಯಿದೆಗೆ ಅನುಗುಣವಾಗಿ ಹೊರಡಿಸಲಾಗಿದೆ.

ಎಜಿ: ಎರಡನೆಯದು, ಸಂವಿಧಾನದ ೨೫ನೇ ವಿಧಿಯಡಿ ಹಿಜಾಬ್‌ ಧರಿಸುವುದು ಇಸ್ಲಾಂನ ಅಗತ್ಯ ಆಚರಣೆಗೆ ಸಂಬಂಧಿಸಿದೆ. ಹಿಜಾಬ್‌ ಧರಿಸುವುದು ಇಸ್ಲಾಂನ ಅಗತ್ಯ ಧಾರ್ಮಿಕ ಆಚರಣೆಯಲ್ಲ ಎಂಬುದು ನಮ್ಮ ನಿಲುವು.

ಎಜಿ: ಮೂರನೆಯದು, ಹಿಜಾಬ್ ಧರಿಸುವ ಹಕ್ಕನ್ನು 19(1)(ಎ) ವಿಧಿಯಲ್ಲಿ ಗುರುತಿಸಬಹುದು ಮತ್ತು ಅದನ್ನು ತಡೆಗಟ್ಟುವುದು 19(1)(ಎ) ರ ಉಲ್ಲಂಘನೆ ಎಂಬ ವಾದವಿದೆ. ಅರ್ಜಿದಾರರ ವಾದದಂತೆ ಇದು 19(1)(ಎ) ರ ಉಲ್ಲಂಘನೆಯಲ್ಲ.

ಎಜಿ ನಾವದಗಿ: ನಮ್ಮ ಪ್ರಕಾರ ಶಬರಿಮಲೆ ಮತ್ತು ಶಾಹೀರಾ ಬಾನೋ ಪ್ರಕರಣದಲ್ಲಿ ಸುಪ್ರೀಂ ತೀರ್ಪುಗಳಲ್ಲಿ ವಿವರಿಸಿದಂತೆ ಅಂಗೀಕರಿಸಬೇಕಾದ ಹಿಜಾಬ್ ಅಭ್ಯಾಸವು ಸಾಂವಿಧಾನಿಕ ನೈತಿಕತೆ ಮತ್ತು ವೈಯಕ್ತಿಕ ಘನತೆಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

ಸಿಜೆ ಅವಸ್ಥಿ: ಸರ್ಕಾರದ ಆದೇಶದ ಹಿಂದಿನ ಉದ್ದೇಶನವನ್ನು ನಾವು ತಿಳಿಯಬೇಕಿದೆ.

ಎಜಿ: ಸರ್ಕಾರದ ಆದೇಶ ಹಿಂದಿನ ಹಿನ್ನೆಲೆಯನ್ನು ನಾವು ನೋಡಬೇಕಿದೆ. ಇದು ಉಡುಪಿಯ ಸರ್ಕಾರಿ ಪಿಯು ಕಾಲೇಜಿಗೆ ಕೇಂದ್ರೀಕೃತವಾಗಿದೆ. ಅಲ್ಲಿ ಸಮವಸ್ತ್ರ ಸಂಹಿತೆಯು 2013ರಿಂದಲೂ ಇದೆ.

ಎಜಿ: ವಿದ್ಯಾರ್ಥಿನಿಯರ ಸಮವಸ್ತ್ರ ಬದಲಿಸುವುದಕ್ಕೆ ಸಂಬಂಧಿಸಿದಂತೆ ಕಾಲೇಜು ಅಭಿವೃದ್ಧಿ ಸಮಿತಿಯು ನಿಲುವಳಿ ಮಾಡಿತ್ತು. 2013-2014ರಲ್ಲೇ ಸಮವಸ್ತ್ರ ಸೂಚಿಸಲಾಗಿತ್ತು ಎಂಬುದನ್ನು ತೋರಿಸುವ ಉದ್ದೇಶ ಹೊಂದಲಾಗಿದೆ.

ನ್ಯಾ. ದೀಕ್ಷಿತ್‌: ಕಾಯಿದೆಯ ಅಡಿ ಕಾಲೇಜು (ಸಿಡಿಸಿ) ಅಭಿವೃದ್ಧಿ ಸಮಿತಿಯ ಮಾನ್ಯತೆ ಏನು? ಎಜಿ: ಸಿಡಿಸಿ ಬಗ್ಗೆ ತಿಳಿಯಲು, ಕರ್ನಾಟಕ ಶಿಕ್ಷಣ ಕಾಯಿದೆಗೆ ಸಂಬಂಧಿಸಿದಂತೆ ನ್ಯಾಯಾಲಯದ ಗಮನ ಸೆಳೆಯಲು ಬಯಸುತ್ತೇನೆ.

ಎಜಿ: ವಾಸ್ತವಿಕ ಹಿನ್ನೆಲೆ ಮತ್ತು ಸರ್ಕಾರದ ಆದೇಶವನ್ನು ನಾವು ನಿಮಗೆ ತೋರಿಸುವೆ.

ಸಿಡಿಸಿ ಅಸ್ತಿತ್ವಕ್ಕೆ ಬಂದಿರುವುದರ ಕುರಿತು ಸತ್ತೋಲೆ ಓದುತ್ತಿರುವ ಎಜಿ. ಸಿಜೆ ಅವಸ್ಥಿ: ಆ ಸುತ್ತೋಲೆಯನ್ನು ಪ್ರಶ್ನಿಸಿಲ್ಲ. ಎಜಿ: ಇಲ್ಲ.

ಎಜಿ: 2018ರ ಸಿಡಿಸಿ ನಿಲುವಳಿ ಉಲ್ಲೇಖ. ಸಮವಸ್ತ್ರಕ್ಕೆ ಸಂಬಂಧಿಸಿದಂತೆ 2018ರಲ್ಲಿ ನಿಲುವಳಿ ಪಾಸು ಮಾಡಲಾಗಿದೆ. ಇದೇ ಸಮವಸ್ತ್ರ ಮುಂದುವರಿಸಲು ನಿರ್ಧರಿಸಲಾಗಿತ್ತು. ವಿದ್ಯಾರ್ಥಿನಿಯರಿಗೆ ಸಮವಸ್ತ್ರ ಸೂಚಿಸಲಾಗಿತ್ತು. ಆಗ ಯಾವುದೇ ಸಮಸ್ಯೆಯಾಗಿರಲಿಲ್ಲ.

ಎಜಿ: 2021ರಲ್ಲೂ ಯಾವುದೇ ಸಮಸ್ಯೆಯಾಗಿರಲಿಲ್ಲ. ಹಿಜಾಬ್‌ ಧರಿಸಿ ಕಾಲೇಜಿಗೆ ಬರುತ್ತೇವೆ ಎಂದು ಒಂದಷ್ಟು ವಿದ್ಯಾರ್ಥಿನಿಯರು ಪ್ರಾಂಶುಪಾಲರಿಗೆ ತಿಳಿಸಿದ್ದರು. ಇದು ವಿದ್ಯಾರ್ಥಿನಿಯರ ಕಾಲೇಜು. ಇಲ್ಲಿ 956 ವಿದ್ಯಾರ್ಥಿನಿಯರು ಕಲಿಯುತ್ತದ್ದಾರೆ ಎಂದ ಎಜಿ.

ಎಜಿ: ಹೀಗಾಗಿ, 2022ರ ಜನವರಿ 1ರಂದು ಸಿಡಿಸಿ ಸಮವಸ್ತ್ರಕ್ಕೆ ಸಂಬಂಧಿಸಿದಂತೆ ನಿಲುವಳಿ ಹೊರಡಿಸಿದೆ. ಇದನ್ನು ಎಲ್ಲಾ ಶ್ರದ್ಧೆ ಮತ್ತು ಸರಿಯಾದ ದೃಷ್ಟಿಕೋನದಲ್ಲಿ ಪರಿಗಣಿಸಲು ಬಯಸಿದ್ದರು.

ಎಜಿ: 1985ರಿಂದ ಇಲ್ಲಿಯವರೆಗೆ ಎಲ್ಲಾ ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿದ್ದು, ಯಾವುದೇ ಪ್ರಶ್ನೆ ಎತ್ತಿಲ್ಲ ಎಂದು ನಿಲುವಳಿಯಲ್ಲಿ ಉಲ್ಲೇಖಿಸಲಾಗಿದೆ.

ಎಜಿ: ಅದು ವಿದ್ಯಾರ್ಥಿನಿಯರ ಕಾಲೇಜಾಗಿದ್ದು, ಶಿಸ್ತಿನ ದೃಷ್ಟಿಯಿಂದ ಸಮವಸ್ತ್ರ ಜಾರಿ ಮಾಡಲಾಗಿದೆ. ಸಮವಸ್ತ್ರ ಧರಿಸಿ ಬರಲು ಮಕ್ಕಳಿಗೆ ತಿಳಿಸುವಂತೆ ಪೋಷಕರಿಗೆ ಕೋರಲಾಗಿದೆ.

ಎಜಿ: ಪ್ರಕರಣದ ಸೂಕ್ಷ್ಮತೆಯನ್ನು ನಮಗೆ ತಿಳಿಸಿದ ಬಳಿಕ, ನಾವು ಹಲವು ವಿಚಾರಗಳು ಮತ್ತು ವಿವಿಧ ತೀರ್ಪುಗಳನ್ನು ಪರಿಶೀಲಿಸಲು ಉನ್ನತಮಟ್ಟದ ಸಮಿತಿ ರಚಿಸುವುದಾಗಿ ತಿಳಿಸಿದೆವು. ಅಲ್ಲಿಯ ತನಕ ಯಥಾಸ್ಥಿತಿ ಕಾಪಾಡುವಂತೆ ತಿಳಿಸಿದ್ದೆವು.

ಎಜಿ: 2022ರ ಜನವರಿ 25ರಂದು ಸಿಡಿಸಿಯು ನಿಲುವಳಿ ಪಾಸು ಮಾಡಿದೆ. ಯಥಾಸ್ಥಿತಿ ಕಾಪಾಡಬೇಕು ಎಂದು ಹೇಳಿದೆ. ಹಿಂದಿನಂತೆಯೇ ಸಮವಸ್ತ್ರ ನಿಯಮ ಪಾಲಿಸುವಂತೆ ಪೋಷಕರಿಗೆ ಕೋರಲಾಗಿದೆ.

ಎಜಿ: ಆಶ್ಚರ್ಯಕರ ವಿಚಾರವೆಂದರೆ ನಿಲುವಳಿ ಪಾಸು ಮಾಡಿದ ಬಳಿಕ ಈ ರಿಟ್‌ ಮನವಿ ಸಲ್ಲಿಸಲಾಗಿದೆ. ಆ ಸಂದರ್ಭದಲ್ಲಿ ಸರ್ಕಾರದ ಆದೇಶ ಇರಲಿಲ್ಲ.

ಎಜಿ: ಸಂಸ್ಥೆಯಲ್ಲಿ ವಿರೋಧ ಆರಂಭವಾದ ಹಿನ್ನೆಲೆಯಲ್ಲಿ ಸಿಡಿಸಿಯು ಜನರವರಿ ೩೧ರಂದು ಮತ್ತೊಂದು ನಿಲುವಳಿ ಪಾಸು ಮಾಡಿತು. ಈ ನಿಲುವಳಿಯಲ್ಲಿ ಹಿಜಾಬ್‌ ಧರಿಸಿದ ಮಕ್ಕಳನ್ನು ಕಳುಹಿಸಿದರೆ ಶಿಸ್ತುಕ್ರಮಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.

ವಕೀಲ ಸಿರಾಜುದ್ದೀನ್‌ ಅಹ್ಮದ್‌ : ಶಾಲಾ ಆಡಳಿತ ಮಂಡಳಿಯು ಹಿಜಾಬ್‌ ಧರಿಸಲು ಬಿಡುತ್ತಿಲ್ಲ. ಈ ಸಮಸ್ಯೆ ಆರಂಭವಾಗುವುದಕ್ಕೂ ಮುನ್ನ ಅವರು ಅನುಮತಿಸಿದ್ದರು.

ಸಿಜೆ ಅವಸ್ಥಿ: ಆದರೆ, ನಿಮ್ಮ ಮನವಿ ಅದಲ್ಲ. ನೀವು ಮನವಿಯಲ್ಲಿ ಏನಿದೆ ಅದನ್ನು ಹೇಳುತ್ತಿಲ್ಲ. ವಕೀಲ ಸಿರಾಜುದ್ದೀನ್‌ ಅಹ್ಮದ್‌ : ನ್ಯಾಯಾಲಯದ ಆದೇಶ ಬಳಿಕ ಎಲ್ಲಾ ಕಾಲೇಜುಗಳು ಹಿಜಾಬ್‌ ಧರಿಸಲು ಬಿಡುತ್ತಿಲ್ಲ. ಹಿಜಾಬ್‌ ಧರಿಸಲು ಅವಕಾಶ ಕೊಟ್ಟಿದ್ದವರೂ ಈಗ ಬಿಡುತ್ತಿಲ್ಲ. ನಿಮ್ಮ ಆದೇಶವನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಂಡಿಲ್ಲ.

ಸಿಜೆ ಅವಸ್ಥಿ: ಸಂಬಂಧಿತ ಕಾಲೇಜುಗಳನ್ನು ನೀವು ಪಕ್ಷಕಾರರನ್ನಾಗಿಸಿಲ್ಲ. ವಕೀಲ ಸಿರಾಜುದ್ದೀನ್‌ ಅಹ್ಮದ್‌ : ಮನವಿಯನ್ನು ತಿದ್ದುಪಡಿ ಮಾಡಲು ನಾನು ಮಧ್ಯಪ್ರವೇಶ ಮನವಿ ಸಲ್ಲಿಸಿರುವೆ.

ನ್ಯಾ. ದೀಕ್ಷಿತ್‌: ಮನವಿಗೆ ಅನುಮತಿಸಿದರೂ ಕಾಲೇಜುಗಳು ಅನುಮತಿಸುತ್ತಿಲ್ಲ ಎಂಬುದಕ್ಕೆ ಹೇಳಿಕೆಗಳೆಲ್ಲಿವೆ? ನಿಯಮ ೪೧ ಅನ್ನು ಪಾಲಿಸಲಾಗಿಲ್ಲ. ಸಿಜೆ ಅವಸ್ಥಿ: ಸರಿಯಾದ ಮನವಿ ಸಲ್ಲಿಸಿ.

ವಕೀಲ ಸಿರಾಜುದ್ದೀನ್‌ ಅಹ್ಮದ್‌ : ಹೊಸ ಮನವಿ ಸಲ್ಲಿಸಲು ಅವಕಾಶ ಮಾಡಿ. ಪೀಠದ ಆದೇಶ: ಮನವಿ ಹಿಂಪಡೆದು, ಹೊಸ ಮನವಿ ಸಲ್ಲಿಸಲು ಅವಕಾಶ.

ವಕೀಲೆ ಕೀರ್ತಿ ಸಿಂಗ್‌ ಅವರ ಮನವಿಯಲ್ಲಿ ದೋಷಗಳನ್ನು ಸರಿಪಡಿಸಲು ಅವಕಾಶ ಮಾಡಿದ ಪೀಠ.   ರಾಜ್ಯ ಅಲ್ಪಸಂಖ್ಯಾತ ಶೈಕ್ಷಣಿಕ ಸಂಸ್ಥೆಗಳ ನಿರ್ವಹಣಾ ಒಕ್ಕೂಟದ ಪರವಾಗಿ ವಾದಿಸಿದ ವಕೀಲ ಜಿ ಆರ್‌ ಮೋಹನ್.‌

 ಸಿಜೆ ಅವಸ್ಥಿ: ಇದು ನೋಂದಾಯಿತ ಸಂಸ್ಥೆಯೇ? ವಕೀಲ ಜಿ ಆರ್‌ ಮೋಹನ್‌: ಹೌದು. ೨೦೦೬-೦೭ರಲ್ಲಿ ಇದನ್ನು ನೋಂದಾಯಿಸಲಾಗಿದೆ.

ಎಜಿ ನಾವದಗಿ: ನನಗೆ ತಿಳಿದಿರುವ ಹಾಗೆ ವಿವಾದ ಮೂರು ವಿಭಾಗಗಳನ್ನು ಹೊಂದಿದೆ. ಮೊದಲಿಗೆ, ಫೆಬ್ರವರಿ ೫ರ ಸರ್ಕಾರದ ಆದೇಶವನ್ನು ಪ್ರಶ್ನಿಸಲಾಗಿದೆ. ಸರ್ಕಾರದ ಆದೇಶವನ್ನು ಕರ್ನಾಟಕ ಶಿಕ್ಷಣ ಕಾಯಿದೆಗೆ ಅನುಗುಣವಾಗಿ ಹೊರಡಿಸಲಾಗಿದೆ. ಎರಡನೆಯದು, ಸಂವಿಧಾನದ ೨೫ನೇ ವಿಧಿಯಡಿ ಹಿಜಾಬ್‌ ಧರಿಸುವುದು ಇಸ್ಲಾಂನ ಅಗತ್ಯ ಆಚರಣೆಗೆ ಸಂಬಂಧಿಸಿದೆ. ಹಿಜಾಬ್‌ ಧರಿಸುವುದು ಇಸ್ಲಾಂನ ಅಗತ್ಯ ಧಾರ್ಮಿಕ ಆಚರಣೆಯಲ್ಲ ಎಂಬುದು ನಮ್ಮ ನಿಲುವು. ಮೂರನೆಯದು, ಹಿಜಾಬ್ ಧರಿಸುವ ಹಕ್ಕನ್ನು 19(1)(ಎ) ವಿಧಿಯಲ್ಲಿ ಗುರುತಿಸಬಹುದು ಮತ್ತು ಅದನ್ನು ತಡೆಗಟ್ಟುವುದು 19(1)(ಎ) ರ ಉಲ್ಲಂಘನೆ ಎಂಬ ವಾದವಿದೆ. ಅರ್ಜಿದಾರರ ವಾದದಂತೆ ಇದು 19(1)(ಎ) ರ ಉಲ್ಲಂಘನೆಯಲ್ಲ. ನಮ್ಮ ಪ್ರಕಾರ ಶಬರಿಮಲೆ ಮತ್ತು ಶಾಹೀರಾ ಬಾನೋ ಪ್ರಕರಣದಲ್ಲಿ ಸುಪ್ರೀಂ ತೀರ್ಪುಗಳಲ್ಲಿ ವಿವರಿಸಿದಂತೆ ಅಂಗೀಕರಿಸಬೇಕಾದ ಹಿಜಾಬ್ ಅಭ್ಯಾಸವು ಸಾಂವಿಧಾನಿಕ ನೈತಿಕತೆ ಮತ್ತು ವೈಯಕ್ತಿಕ ಘನತೆಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

ಸಿಜೆ ಅವಸ್ಥಿ: ಸರ್ಕಾರದ ಆದೇಶದ ಹಿಂದಿನ ಉದ್ದೇಶನವನ್ನು ನಾವು ತಿಳಿಯಬೇಕಿದೆ. ಎಜಿ ನಾವದಗಿ : ಸರ್ಕಾರದ ಆದೇಶ ಹಿಂದಿನ ಹಿನ್ನೆಲೆಯನ್ನು ನಾವು ನೋಡಬೇಕಿದೆ. ಇದು ಉಡುಪಿಯ ಸರ್ಕಾರಿ ಪಿಯು ಕಾಲೇಜಿಗೆ ಕೇಂದ್ರೀಕೃತವಾಗಿದೆ. ಅಲ್ಲಿ ಸಮವಸ್ತ್ರ ಸಂಹಿತೆಯು ೨೦೧೩ರಿಂದಲೂ ಇದೆ. ವಿದ್ಯಾರ್ಥಿನಿಯರ ಸಮವಸ್ತ್ರ ಬದಲಿಸುವುದಕ್ಕೆ ಸಂಬಂಧಿಸಿದಂತೆ ಕಾಲೇಜು ಅಭಿವೃದ್ಧಿ ಸಮಿತಿಯು ನಿಲುವಳಿ ಮಾಡಿತ್ತು. ೨೦೧೩-೧೪ರಲ್ಲೇ ಸಮವಸ್ತ್ರ ಸೂಚಿಸಲಾಗಿತ್ತು ಎಂಬುದನ್ನು ತೋರಿಸುವ ಉದ್ದೇಶ ಹೊಂದಲಾಗಿದೆ.

ನ್ಯಾ. ದೀಕ್ಷಿತ್‌: ಕಾಯಿದೆಯ ಅಡಿ ಕಾಲೇಜು (ಸಿಡಿಸಿ) ಅಭಿವೃದ್ಧಿ ಸಮಿತಿಯ ಮಾನ್ಯತೆ ಏನು? ಎಜಿ ನಾವದಗಿ : ಸಿಡಿಸಿ ಬಗ್ಗೆ ತಿಳಿಯಲು, ಕರ್ನಾಟಕ ಶಿಕ್ಷಣ ಕಾಯಿದೆಗೆ ಸಂಬಂಧಿಸಿದಂತೆ ನ್ಯಾಯಾಲಯದ ಗಮನ ಸೆಳೆಯಲು ಬಯಸುತ್ತೇನೆ. ವಾಸ್ತವಿಕ ಹಿನ್ನೆಲೆ ಮತ್ತು ಸರ್ಕಾರದ ಆದೇಶವನ್ನು ನಾವು ನಿಮಗೆ ತೋರಿಸುವೆ. ಸಿಡಿಸಿ ಅಸ್ತಿತ್ವಕ್ಕೆ ಬಂದಿರುವುದರ ಕುರಿತು ಸತ್ತೋಲೆ ಓದಿದ ಎಜಿ.

 ಸಿಜೆ ಅವಸ್ಥಿ: ಆ ಸುತ್ತೋಲೆಯನ್ನು ಪ್ರಶ್ನಿಸಿಲ್ಲ. ಎಜಿ ನಾವದಗಿ : ಇಲ್ಲ. ಸಮವಸ್ತ್ರಕ್ಕೆ ಸಂಬಂಧಿಸಿದಂತೆ ೨೦೧೮ರಲ್ಲಿ ನಿಲುವಳಿ ಪಾಸು ಮಾಡಲಾಗಿದೆ. ಇದೇ ಸಮವಸ್ತ್ರ ಮುಂದುವರಿಸಲು ನಿರ್ಧರಿಸಲಾಗಿತ್ತು. ವಿದ್ಯಾರ್ಥಿನಿಯರಿಗೆ ಸಮವಸ್ತ್ರ ಸೂಚಿಸಲಾಗಿತ್ತು. ಆಗ ಯಾವುದೇ ಸಮಸ್ಯೆಯಾಗಿರಲಿಲ್ಲ. ೨೦೨೧ರಲ್ಲೂ ಯಾವುದೇ ಸಮಸ್ಯೆಯಾಗಿರಲಿಲ್ಲ. ಹಿಜಾಬ್‌ ಧರಿಸಿ ಕಾಲೇಜಿಗೆ ಬರುತ್ತೇವೆ ಎಂದು ಒಂದಷ್ಟು ವಿದ್ಯಾರ್ಥಿನಿಯರು ಪ್ರಾಂಶುಪಾಲರಿಗೆ ತಿಳಿಸಿದ್ದರು. ಇದು ವಿದ್ಯಾರ್ಥಿನಿಯರ ಕಾಲೇಜು. ಇಲ್ಲಿ ೯೫೬ ವಿದ್ಯಾರ್ಥಿನಿಯರು ಕಲಿಯುತ್ತದ್ದಾರೆ. ಹೀಗಾಗಿ, ೨೦೨೨ರ ಜನವರಿ ೧ರಂದು ಸಿಡಿಸಿ ಸಮವಸ್ತ್ರಕ್ಕೆ ಸಂಬಂಧಿಸಿದಂತೆ ನಿಲುವಳಿ ಹೊರಡಿಸಿದೆ. ಇದನ್ನು ಎಲ್ಲಾ ಶ್ರದ್ಧೆ ಮತ್ತು ಸರಿಯಾದ ದೃಷ್ಟಿಕೋನದಲ್ಲಿ ಪರಿಗಣಿಸಲು ಬಯಸಿದ್ದರು. ೧೯೮೫ರಿಂದ ಇಲ್ಲಿಯವರೆಗೆ ಎಲ್ಲಾ ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿದ್ದು, ಯಾವುದೇ ಪ್ರಶ್ನೆ ಎತ್ತಿಲ್ಲ ಎಂದು ನಿಲುವಳಿಯಲ್ಲಿ ಉಲ್ಲೇಖಿಸಲಾಗಿದೆ.

Join Whatsapp
Exit mobile version