ನವದೆಹಲಿ: ‘ಕಾಲೇಜಿನಲ್ಲಿ ಹಿಜಾಬ್ ನಿಷೇಧಿಸುತ್ತಿರುವುದು ಉಡುಪುಗಳ ಏಕರೂಪತೆ ಜಾರಿಗೊಳಿಸಲು ಅಲ್ಲ, ಬದಲಾಗಿ ಮುಸ್ಲಿಮರನ್ನು ಯಾವುದೇ ನೆಪದಲ್ಲಿ ಗುರಿಯಾಗಿಸುವುದೇ ಇದರ ಉದ್ದೇಶ’ ಎಂದು ಕಾಂಗ್ರೆಸ್ ಸಂಸದ ಕಾರ್ತಿ ಪಿ ಚಿದಂಬರಂ ಆಕ್ರೋಶ ವ್ಯಕ್ತಪಡಿಸಿದ್ದಾರೆ
ಕುಂದಾಪುರ ಸರ್ಕಾರಿ ಕಾಲೇಜಿನಲ್ಲಿ ಹಿಜಾಬ್ ಧರಿಸಿರುವ ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಿಸಿದ ಘಟನೆಗೆ ಸಂಬಂಧಿಸಿ ಟ್ವೀಟ್ ಮಾಡಿರುವ ಅವರು, “ಹಿಜಾಬ್ ನಿಷೇಧಿಸುತ್ತಿರುವ ಈ ಕ್ರಮವು ವಿದ್ಯಾರ್ಥಿಗಳ ಉಡುಪುಗಳಲ್ಲಿ ಏಕರೂಪತೆಯನ್ನು ಜಾರಿಗೊಳಿಸಲು ಅಲ್ಲ. ಇಸ್ಲಾಮಿಕ್ ನಂಬಿಕೆಯ ಜನರು ಯಾವುದೇ ನೆಪದಲ್ಲಿ ಗುರಿಯಾಗುತ್ತಾರೆ ಎಂಬ ಸ್ಪಷ್ಟ ಸಂಕೇತವನ್ನು ಕಳುಹಿಸುವುದಾಗಿದೆ. ಇದೇ ರೀತಿಯ ನಿಯಮ ಸಿಖ್ ಪೇಟದ ವಿರುದ್ದ ಮಾಡಲು ಯಾವುದೇ ಸಂಸ್ಥೆಗೆ ಮಾಡಲು ಧೈರ್ಯವಿದೆಯೇ?” ಎಂದು ಅವರು ಪ್ರಶ್ನಿಸಿದ್ದಾರೆ.