Home ಟಾಪ್ ಸುದ್ದಿಗಳು ಕೋವಿಡ್ 4 ನೇ ಅಲೆ; ಚೀನಾದಲ್ಲಿ ಮತ್ತೆ ಲಾಕ್ ಡೌನ್, ಆಹಾರಕ್ಕಾಗಿ ಪರದಾಟ

ಕೋವಿಡ್ 4 ನೇ ಅಲೆ; ಚೀನಾದಲ್ಲಿ ಮತ್ತೆ ಲಾಕ್ ಡೌನ್, ಆಹಾರಕ್ಕಾಗಿ ಪರದಾಟ

ನವದೆಹಲಿ: ಚೀನಾದಲ್ಲಿದಿನೇ ದಿನೇ  ಕೊವಿಡ್ ಕೇಸುಗಳ ಸಂಖ್ಯೆ ಹೆಚ್ಚುತ್ತಿದ್ದು, ಮತ್ತೆ ಚೀನಾದಲ್ಲಿ ಕೆಟ್ಟ ಪರಿಸ್ಥಿತಿಗಳು ಎದುರಾಗಿವೆ. ಲಾಕ್ಡೌನ್ ಘೋಷಿಸಲಾದ ಹಿನ್ನೆಲೆಯಲ್ಲಿ ಸೂಪರ್‌ಮಾರ್ಕೆಟ್‌ಗಳನ್ನು ಮುಚ್ಚಲಾಗಿದೆ. ಈ ಕಾರಣದಿಂದ ಚೀನಾದ ಪ್ರಮುಖ ಹಣಕಾಸು ಕೇಂದ್ರವಾದ ಶಾಂಘೈನಲ್ಲಿ 26 ದಶಲಕ್ಷಕ್ಕೂ ಹೆಚ್ಚು ನಿವಾಸಿಗಳು ಆಹಾರವನ್ನು ಸಂಗ್ರಹಿಸಲು ಪರದಾಡುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಹೊಸ ಕೊರೋನಾ ವೈರಸ್ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಚೀನಾ ತನ್ನ ಅತಿದೊಡ್ಡ ನಗರವಾದ ಶಾಂಘೈನಲ್ಲಿ ಕೊನೆಗೊಳಿಸಲು ಬಯಸಿದ್ದ ಕೊವಿಡ್ -19 ತಡೆಯಾಜ್ಞೆಗಳನ್ನು ಮತ್ತೆ ವಿಸ್ತರಿಸಿದೆ  ಎಂದು ಮೂಲಗಳು ತಿಳಿಸಿವೆ.

ಚೀನಾದಲ್ಲಿ ರೋಗಲಕ್ಷಣಗಳಿಲ್ಲದ ಕೊವಿಡ್ ಸೋಂಕಿತರಿಗೆ ಮನೆಯಲ್ಲಿಯೇ ಕ್ವಾರಂಟೈನ್ ಮಾಡಲು ಅನುಮತಿಸಬೇಕೆಂದು ಕರೆ ನೀಡಲಾಗಿದೆ ಎಂದು ಶಾಂಘೈ ನಗರದ ಆರೋಗ್ಯ ಆಯೋಗದ ಅಧಿಕಾರಿ ವು ಕಿಯಾನ್ಯು ಹೇಳಿದ್ದಾರೆ.

Join Whatsapp
Exit mobile version