Home ಟಾಪ್ ಸುದ್ದಿಗಳು ಫೆಬ್ರವರಿ 20ರಂದು ಬಿಜೆಪಿಯೇತರ ಮುಖ್ಯಮಂತ್ರಿಗಳ ಸಭೆಯಲ್ಲಿ ಠಾಕ್ರೆ, ಕೆಸಿಆರ್ ಭಾಗಿ

ಫೆಬ್ರವರಿ 20ರಂದು ಬಿಜೆಪಿಯೇತರ ಮುಖ್ಯಮಂತ್ರಿಗಳ ಸಭೆಯಲ್ಲಿ ಠಾಕ್ರೆ, ಕೆಸಿಆರ್ ಭಾಗಿ

ನವದೆಹಲಿ: ಮುಂಬಯಿಯಲ್ಲಿ ಫೆಬ್ರವರಿ 20ರಂದು ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರನ್ನು ಭೇಟಿಯಾಗಿ ಬಿಜೆಪಿಯವರ ಮುಖ್ಯಮಂತ್ರಿಗಳ ಸಮಾಗಮ, ಸಮಾವೇಶ, ಸಹಕಾರದ ಬಗ್ಗೆ ಮಾತುಕತೆ ನಡೆಸುವರು. ಮೋದಿ ಸರಕಾರದ ಒಕ್ಕೂಟ ಧರ್ಮ ವಿರೋಧಿ ನೀತಿಯನ್ನು ಇವರೆಲ್ಲ ವಿರೋಧಿಸುವರು.

ಬುಧವಾರ ಬೆಳಿಗ್ಗೆ ಠಾಕ್ರೆಯವರು ರಾವ್ ಅವರಿಗೆ ದೂರವಾಣಿ ಕರೆ ಮಾಡಿ ನೀಡಿದ ಕರೆಗೆ ಒಪ್ಪಿದ ತೆಲಂಗಾಣದ ಮುಖ್ಯಮಂತ್ರಿ ಮುಂಬಯಿಗೆ ಹೋಗುತ್ತಿದ್ದಾರೆ. ಬಿಜೆಪಿಯ ಜನವಿರೋಧಿ ನೀತಿಯ ವಿರುದ್ಧ ರಾವ್ ಅವರು ನಡೆಸಿರುವ ಹೋರಾಟವನ್ನು ಠಾಕ್ರೆಯವರು ಪೂರ್ಣವಾಗಿ ಬೆಂಬಲಿಸಿರುವರು. ಸಂವಿಧಾನದ ಆಶಯದಂತೆ ಒಕ್ಕೂಟ ಸರಕಾರದಲ್ಲಿ ರಾಜ್ಯ ಸರಕಾರಗಳನ್ನು ಹಕ್ಕನ್ನು ಪ್ರತಿಪಾದಿಸಲು ಇವರೆಲ್ಲ ಒಂದಾಗುತ್ತಿದ್ದಾರೆ ಎಂದು ಮುಖ್ಯಮಂತ್ರಿಗಳ ಕಚೇರಿ ತಿಳಿಸಿದೆ.

ದೇಶದ ವಿಭಜಕ ಶಕ್ತಿ ಆಗಿರುವ ಕೇಂದ್ರದ ನೀತಿಯ ವಿರುದ್ಧ ರಾವ್ ಅವರು ನಡೆಸಿರುವ ಹೋರಾಟವನ್ನು ಠಾಕ್ರೆಯವರು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಸರಿಯಾದ ಸಮಯದಲ್ಲಿ ರಾವ್ ಧ್ವನಿಯೆತ್ತಿದ್ದಾರೆ. ನಾವೆಲ್ಲ ಅವರ ಜೊತೆಗಿದ್ದೇವೆ. ರಾಷ್ಟ್ರದ ಹಿತದ ದೃಷ್ಟಿಯಿಂದ ರಾಜ್ಯಗಳ ಹಕ್ಕನ್ನು ಉಳಿಸಲು ಅವರು ತಮ್ಮ ಹೋರಾಟವನ್ನು ಮುಂದುವರಿಸಬೇಕಾಗಿದೆ. “ಅವರು ಅದೇ ಮಾರ್ಗದಿಂದ ಮುಂದುವರಿಯಲಿ. ನಾವು ನಮ್ಮ ಪೂರ್ಣ ಬೆಂಬಲ ನೀಡುತ್ತೇವೆ. ದೇಶದಲ್ಲಿ ಈ ನಿಟ್ಟಿನಲ್ಲಿ ಸಾರ್ವಜನಿಕ ಅಭಿಪ್ರಾಯವನ್ನು ಒಗ್ಗೂಡಿಸುವಲ್ಲಿ ನಾವೆಲ್ಲ ಶ್ರಮಿಸುತ್ತೇವೆ. ಮುಂದಿನ ಕಾರ್ಯಾಚರಣೆಗಾಗಿ ನನ್ನ ಆಹ್ವಾನವನ್ನು ಒಪ್ಪಿಕೊಳ್ಳಿ” ಎಂದು ಠಾಕ್ರೆಯವರು ಪೋನಿನಲ್ಲಿ ಹೇಳಿದ್ದಾರೆ.

ಮುಲುಂಗ್ ಜಿಲ್ಲೆಯ ಮೇದಾರಮ್ ನಲ್ಲಿ ನಡೆಯುವ ಭಾರೀ ಜನ ಜಾತ್ರೆ ಸೇರುವ ತೆಲಂಗಾಣದ ಬುಡಕಟ್ಟು ಜನರ ಜಾತ್ರೆಯಾದ ಸಮ್ಮಕ್ಕ ಸಾರಕ್ಕ ಮೇಳದಲ್ಲಿ ಫೆಬ್ರವರಿ 18ರಂದು ಚಂದ್ರಶೇಖರ ರಾವ್ ಪಾಲ್ಗೊಂಡು ಪ್ರಾರ್ಥನೆ ಸಲ್ಲಿಸುವರು. ಫೆಬ್ರವರಿ 21ರಂದು ಅವರು ಮೇದಕ್ ಜಿಲ್ಲೆಯ ನಾರಾಯಣಖೇಡ್ ನಲ್ಲಿ ಸಂಗಮೇಶ್ವರ ಬಸವೇಶ್ವರ ಏತ ನೀರಾವರಿ ಯೋಜನೆಗೆ ಶಿಲಾನ್ಯಾಸ ನಡೆಸುವರು. ಫೆಬ್ರವರಿ 23ರಂದು ಸಿದ್ದಿಪೇಟ್ ಜಿಲ್ಲೆಯಲ್ಲಿ ಮಲ್ಲಣ್ಣ ಸಾಗರ ಜಲಾಶಯವನ್ನು ಲೋಕಾರ್ಪಣೆ ಮಾಡುವರು.

Join Whatsapp
Exit mobile version