Home ಟಾಪ್ ಸುದ್ದಿಗಳು ಪಠ್ಯ ಪರಿಷ್ಕರಣೆ: ಸರಕಾರಕ್ಕೆ ಬರೋಬ್ಬರಿ 2.5 ಕೋಟಿ ಲಾಸ್

ಪಠ್ಯ ಪರಿಷ್ಕರಣೆ: ಸರಕಾರಕ್ಕೆ ಬರೋಬ್ಬರಿ 2.5 ಕೋಟಿ ಲಾಸ್

ಬೆಂಗಳೂರು : ಬಲಫಂಥೀಯ ಚಿಂತನೆಗಳೊಂದಿಗೆ ಪರಿಷ್ಕರಣೆಗೊಂಡ ನೂತನ ಪಠ್ಯದಿಂದಾಗಿ ಸರಕಾರಕ್ಕೆ ಬರೋಬ್ಬರಿ ಎರಡೂವರೆ ಕೋಟಿಯ ಬಹುದೊಡ್ಡ ಮೊತ್ತ ನಷ್ಟ ಉಂಟಾಗಿದೆ.

ಹೊಸಧರ್ಮಗಳ ಉದಯಕ್ಕೆ ಕಾರಣಗಳು , ಟಿಪ್ಪು ಸುಲ್ತಾನ್ ಸಾಧನೆ ಮತ್ತು ಕೊಡುಗೆಗಳನ್ನು ವಿವರಿಸುವ ಪಠ್ಯಾಂಶವನ್ನು ತೆಗೆದು ಹಾಕುವ ಮುನ್ನವೇ 2021-22 ನೇ ಶೈಕ್ಷಣಿಕ ವರ್ಷಕ್ಕೆ 83 ಶೀರ್ಷಿಕೆಗಳ ಒಟ್ಟು 6,76,997 ಪಠ್ಯ ಪುಸ್ತಕಗಳನ್ನು ಮುದ್ರಿಸಿಯಾಗಿತ್ತು. ಆದರೆ ಮುದ್ರಿಸಲಾದ ಇಷ್ಟೊಂದು ಪುಸ್ತಕಗಳು 2022-23 ನೇ ಸಾಲಿಗೆ ಉಪಯೋಗಕ್ಕೆ ಬಾರದಂತಾಗಿದೆ.

ಬಲಫಂಥೀಯ ಚಿಂತನೆಗಳ ತುರುಕುವಿಕೆ ಮತ್ತು ಸಮಾಜ ಸುಧಾರಕರ ಪಠ್ಯಗಳನ್ನು ಕೈ ಬಿಡುವ ಹಠಕ್ಕೆ ಬಿದ್ದ ಸರಕಾರ ತನ್ನ ಖಜಾನೆಗೆ 2.5 ಕೋಟಿಯ ಬಲುದೊಡ್ಡ ಮೊತ್ತದ ಖೋತಾ ತಂದೊಡ್ಡಿದೆ.

Join Whatsapp
Exit mobile version