Home ಟಾಪ್ ಸುದ್ದಿಗಳು ಕಾರುಗಳನ್ನು ಮಾರಾಟ ಮಾಡಲು ಅನುಮತಿಸುವವರೆಗೂ ಟೆಸ್ಲಾ ಕಂಪೆನಿ ಭಾರತದಲ್ಲಿ ಕಾರು ತಯಾರಿಸುವುದಿಲ್ಲ: ಎಲೋನ್ ಮಸ್ಕ್

ಕಾರುಗಳನ್ನು ಮಾರಾಟ ಮಾಡಲು ಅನುಮತಿಸುವವರೆಗೂ ಟೆಸ್ಲಾ ಕಂಪೆನಿ ಭಾರತದಲ್ಲಿ ಕಾರು ತಯಾರಿಸುವುದಿಲ್ಲ: ಎಲೋನ್ ಮಸ್ಕ್

ವಾಷಿಂಗ್ಟನ್: ಭಾರತದಲ್ಲಿ ತನ್ನ ಕಾರುಗಳನ್ನು ಮಾರಾಟ ಮಾಡಲು ಮತ್ತು ಸರ್ವೀಸ್ ನೀಡಲು ಅನುಮತಿಸುವವರೆಗೂ ಸ್ಥಳೀಯವಾಗಿ ತನ್ನ ಉತ್ಪನ್ನಗಳನ್ನು ತಯಾರಿಸುವುದಿಲ್ಲ ಎಂದು ಕಂಪೆನಿಯ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯ ನಿರ್ವಾಹಕ ಎಲಾನ್ ಮಸ್ಕ್ ತಿಳಿಸಿದ್ದಾರೆ.

ದೇಶದಲ್ಲಿ ತನ್ನ ವಾಹನಗಳನ್ನು ಮಾರಾಟ ಮಾಡಲು ಆಮದು ಸುಂಕವನ್ನು ಕಡಿತಗೊಳಿಸಲು ಬಯಸುವ ಅಮೆರಿಕದ ಎಲೆಕ್ಟ್ರಿಕ್ ಕಾರು ತಯಾರಕ ಕಂಪೆನಿ ಟೆಸ್ಲಾದ ಮುಖ್ಯಸ್ಥರಿಂದ ಈ ಮೇಲಿನ ಹೇಳಿಕೆ ಹೊರಬಿದ್ದಿದೆ.

ಭಾರತದಲ್ಲಿ ಟೆಸ್ಲಾ ಉತ್ಪಾದನಾ ಘಟಕವನ್ನು ಸ್ಥಾಪಿಸುವ ಬಗ್ಗೆ ಬಳಕೆದಾರರ ಪ್ರಶ್ನೆಗೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ ಅವರು, ‘ಟೆಸ್ಲಾ ಕಾರುಗಳನ್ನು ಮಾರಾಟ ಮಾಡಲು ಮತ್ತು ಸರ್ವೀಸ್ ನೀಡಲು ನಮಗೆ ಅನುಮತಿಸುವವರೆಗೂ ಯಾವುದೇ ಸ್ಥಳಗಳಲ್ಲಿ ಉತ್ಪಾದನಾ ಘಟಕವನ್ನು ತೆರೆಯುವುದಿಲ್ಲ ಎಂದು ತಿಳಿಸಿದ್ದಾರೆ.

ಟೆಸ್ಲಾ ಕಂಪೆನಿ ತನ್ನ ಎಲೆಕ್ಟ್ರಿಕ್ ವಾಹನಗಳನ್ನು ಭಾರತದಲ್ಲಿ ತಯಾರಿಸಲು ಸಿದ್ಧವಾಗಿದ್ದರೆ ಯಾವುದೇ ಸಮಸ್ಯೆ ಇಲ್ಲ. ಆದರೆ ಕಂಪೆನಿ ಚೀನಾದಿಂದ ಕಾರುಗಳನ್ನು ಆಮದು ಮಾಡಿಕೊಳ್ಳಬಾರದು ಎಂದು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಈ ಹಿಂದೆ ಹೇಳಿಕೆ ನೀಡಿದ್ದರು. ಈ ನಿಟ್ಟಿನಲ್ಲಿ ಎಲಾನ್ ಮಸ್ಕ್ ಅವರು ಈ ಮೇಲಿನಂತೆ ತಿರುಗೇಟು ನೀಡಿದ್ದಾರೆ.

Join Whatsapp
Exit mobile version