Home ವಿದೇಶ ಟೆಸ್ಲಾದಿಂದ ಸ್ಟೀರಿಂಗ್, ಪೆಡಲ್ ಇಲ್ಲದ AI ಆಧಾರಿತ ರೋಬೋಟ್ಯಾಕ್ಸಿ ಬಿಡುಗಡೆ

ಟೆಸ್ಲಾದಿಂದ ಸ್ಟೀರಿಂಗ್, ಪೆಡಲ್ ಇಲ್ಲದ AI ಆಧಾರಿತ ರೋಬೋಟ್ಯಾಕ್ಸಿ ಬಿಡುಗಡೆ

ಲಾಸ್ ಏಂಜಲೀಸ್: ಸ್ಟೀರಿಂಗ್ ವೀಲ್, ಪೆಡಲ್ ಹೊಂದಿರದ ಸ್ವಯಂ-ಚಾಲನೆ ಮಾಡುವ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಆಧಾರಿತ ಎಲೆಕ್ಟ್ರಿಕ್ ರೋಬೋಟ್ಯಾಕ್ಸಿಯನ್ನು ಟೆಸ್ಲಾ ಕಂಪನಿ ಬಿಡುಗಡೆ ಮಾಡಿದೆ.


ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಇಒ ಎಲಾನ್ ಮಸ್ಕ್, ಈ ಕಾರಿನ ಬೆಲೆ 30 ಸಾವಿರ ಡಾಲರ್(ಅಂದಾಜು 25 ಲಕ್ಷ ರೂ.) ಅಥವಾ ಅದಕ್ಕಿಂತಲೂ ಕಡಿಮೆ ಇರಲಿದೆ. ವೈರ್ ಲೆಸ್ ಚಾರ್ಜ್ ಮಾಡಬಹುದಾದ ಈ ಕಾರು ಮಾನವ ಚಾಲಿತ ಕಾರುಗಳಿಗಿಂತ 10 ರಿಂದ 20 ಪಟ್ಟು ಸುರಕ್ಷಿತವಾಗಿರಲಿದೆ ಎಂದು ತಿಳಿಸಿದರು.


ಎರಡು ಆಸನ, ಚಿಟ್ಟೆಯಂತೆ ತೆರೆಯಬಹುದಾದ ಬಾಗಿಲು ಹೊಂದಿರುವ ಈ ಕಾರಿನ ಉತ್ಪಾದನೆ 2026ರಲ್ಲಿ ಆರಂಭವಾಗಲಿದೆ. ಮಾರಾಟ ಜಾಸ್ತಿಯಾದಂತೆ ಬೆಲೆಯೂ ಕಡಿಮೆಯಾಗಲಿದೆ. 2027ರಲ್ಲಿ ಈ ಕಾರು ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ ಎಂದು ಹೇಳಿದರು.


ಟೆಸ್ಲಾ ಕಂಪನಿ 9 ವರ್ಷಗಳ ಹಿಂದೆ ಸ್ವಯಂ ಚಾಲನೆಯತ್ತ ಹೆಚ್ಚು ಒತ್ತು ನೀಡಲು ಶುರುಮಾಡಿತ್ತು. ಆದರೆ ಅದರ ವಿಶ್ವಾಸಾರ್ಹತೆ ಬಗ್ಗೆ ಹಲವು ಅನುಮಾನಗಳು ಹುಟ್ಟಿಕೊಂಡಿತ್ತು. ಆದರೀಗ ಪೂರ್ಣ ಸ್ವಯಂ ಚಾಲನೆ ಮಾಡುವ ರೋಬೋಟಿಕ್ ಟ್ಯಾಕ್ಸಿಯನ್ನ ಉತ್ಪಾದಿಸಿ ಅನಾವರಣ ಮಾಡಿದೆ. ಇದರಲ್ಲಿ ಪ್ರಯಾಣಿಕರು ನಿದ್ರಿಸಬಹುದಾಗಿದೆ. ತಲುಪುವ ಜಾಗದಲ್ಲಿ ಎಚ್ಚರಗೊಳ್ಳಬಹುದಾಗಿದೆ.

Join Whatsapp
Exit mobile version