Home ಟಾಪ್ ಸುದ್ದಿಗಳು ಕೈದಿಯ ಬೆನ್ನಿಗೆ ಕಾದ ಕಬ್ಬಿಣದ ರಾಡ್‌ನಿಂದ ‘ಟೆರರಿಸ್ಟ್’ ಎಂದು ಬರೆದ ಜೈಲು ಅಧೀಕ್ಷಕ!

ಕೈದಿಯ ಬೆನ್ನಿಗೆ ಕಾದ ಕಬ್ಬಿಣದ ರಾಡ್‌ನಿಂದ ‘ಟೆರರಿಸ್ಟ್’ ಎಂದು ಬರೆದ ಜೈಲು ಅಧೀಕ್ಷಕ!

ಚಂಡೀಗಢ: ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಖೈದಿಯೋರ್ವನ ಮೇಲೆ ಜೈಲು ಅಧೀಕ್ಷಕ ಅಮಾನವೀಯವಾಗಿ ವರ್ತಿಸಿರುವ ಘಟನೆ ಪಂಜಾಬ್ ರಾಜ್ಯದ ಬರ್ನಾಲ ಜಿಲ್ಲೆಯಲ್ಲಿ ನಡೆದಿದೆ.

ಬರ್ನಾಲಾ ಜಿಲ್ಲೆಯ ಜೈಲಿನ ಅಧೀಕ್ಷಕ ಖೈದಿಯ ದೇಹದ ಮೇಲೆ ಕಾದ ಕಬ್ಬಿಣದಿಂದ ಪಂಜಾಬಿ ಭಾಷೆಯಲ್ಲಿ ‘ಆಟ್ ವಾದಿ’ (ಭಯೋತ್ಪಾದಕ) ಎಂದು ಹಚ್ಚೆ ಹಾಕಿರುವುದು ವರದಿಯಾಗಿದೆ. ಅಲ್ಲದೆ ಬೆನ್ನು ಪೂರ್ತಿ ರಾಡ್’ನಿಂದ ಹಲ್ಲೆ ನಡೆಸಿರುವ ಗಾಯದ ಗುರುತುಗಳಿವೆ.

ಮಾನ್ಸಾ ಜಿಲ್ಲಾ ನ್ಯಾಯಾಲಯದಲ್ಲಿ NDPS(ನಾರ್ಕೋಟಿಕ್ ಡ್ರಗ್ಸ್ ಆ್ಯಂಡ್ ಸೈಕೋಟ್ರೋಪಿಕ್ ಸಬ್ಸ್ಟೆನ್ಸ್ ಆಕ್ಟ್) ಅಡಿಯಲ್ಲಿ ದಾಖಲಾಗಿರುವ ಪ್ರಕರಣವನ್ನು ಪರಿಗಣಿಸುವಾಗ ಇಪ್ಪತ್ತೆಂಟು ವರ್ಷದ ಕೈದಿ ಕರಂಜಿತ್ ಸಿಂಗ್ ಜೈಲು ಅಧೀಕ್ಷಕರ ಚಿತ್ರಹಿಂಸೆಯ ಕುರಿತು ದೂರು ನೀಡಿದ್ದಾನೆ. ಕರಮ್‌ಜಿತ್ ಡ್ರಗ್ಸ್ ಮತ್ತು ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ.

ಜೈಲು ಅಧೀಕ್ಷಕ ಬಲ್ಬೀರ್ ಸಿಂಗ್ ತನಗೆ ಥಳಿಸಿ ಭಯೋತ್ಪಾದಕ ಎಂಬ ಹಚ್ಚೆ ಹಾಕಿದ್ದಾರೆ ಎಂದು ಕರಂಜಿತ್ ನ್ಯಾಯಾಲಯಕ್ಕೆ ದೂರು ನೀಡಿದ್ದಾನೆ. ಇದೇ ವೇಳೆ ಘಟನೆ ಕುರಿತು ವಿಸ್ತೃತ ತನಿಖೆ ನಡೆಸಬೇಕು ಎಂದು ಪಂಜಾಬ್ ಉಪಮುಖ್ಯಮಂತ್ರಿ ಸುಖಿಂದರ್ ಸಿಂಗ್ ರಾಂಡವಾ ಜೈಲು ADGP ಪಿ.ಕೆ. ಸಿನ್ಹಾ ಅವರಿಗೆ ನಿರ್ದೇಶನ ನೀಡಿದ್ದಾರೆ.

Join Whatsapp
Exit mobile version