Home ಟಾಪ್ ಸುದ್ದಿಗಳು ಉದಯಪುರ ಘಟನೆಯ ಹಿಂದೆ ಭಯೋತ್ಪಾದಕ ಸಂಸ್ಥೆಗಳಿವೆ ಎಂದ ಸಿಎಂ ಬೊಮ್ಮಾಯಿ

ಉದಯಪುರ ಘಟನೆಯ ಹಿಂದೆ ಭಯೋತ್ಪಾದಕ ಸಂಸ್ಥೆಗಳಿವೆ ಎಂದ ಸಿಎಂ ಬೊಮ್ಮಾಯಿ

ಬೆಂಗಳೂರು: ಉದಯಪುರದಲ್ಲಿ ಆಗಿರುವುದು ಅಮಾನವೀಯ ಹಾಗೂ ಅತ್ಯಂತ ಹೇಯ ಕೃತ್ಯ. ಇದರ ಹಿಂದೆ ವ್ಯಕ್ತಿ ಗಳಷ್ಟೇ ಅಲ್ಲ ಭಯೋತ್ಪಾದಕ ಸಂಸ್ಥೆಗಳಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.

ಇದು  ಭಯೋತ್ಪಾದನೆಯ ಒಂದು ಕ್ರಮವಾಗಿದೆ. ಅದರ ಹಿಂದೆ  ದೊಡ್ಡ ಅಂತಾರಾಷ್ಟ್ರೀಯ ಷಡ್ಯಂತರವಿದೆ. ಅದು ಪತ್ತೆಯಾಗಿ,  ಅಪರಾಧಿಗಳನ್ನು ಗಲ್ಲಿಗೇರಿಸಬೇಕು.  ರಾಜಸ್ತಾನ ಸರ್ಕಾರ ಸಂಪೂರ್ಣ ತನಿಖೆ ಕೈಗೊಂಡು ಸೂಕ್ತ ಕ್ರಮ ಜರುಗಿಸಬೇಕು ಎಂದರು.

ಕೇಂದ್ರ ಗೃಹ ಸಚಿವಾಲಯದಿಂದ ರಾಜ್ಯ ಗುತ್ತಿಗೆದಾರರ ಸಂಘಕ್ಕೆ ದಾಖಲೆಗಳನ್ನು ಒದಗಿಸಲು ಸೂಚಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಮಾಹಿತಿ ಕೊಡಲಿ ತೊಂದರೆ ಇಲ್ಲ. ಪ್ರಧಾನ ಮಂತ್ರಿಗಳ ನಿರ್ದೇಶನದ ಮೇರೆಗೆ ತನಿಖೆ ಮಾಡಲಾಗುವುದು ಎಂದರು.

ಬಿ.ಟಿ.ಲಲಿತಾ ನಾಯಕ್ ಅವರು ಪಿ ಎಸ್ ಐ ನೇಮಕಾತಿಗೆ ಪರೀಕ್ಷೆ ನಡೆಸಬಾರದು ಎಂದು ಆಗ್ರಹಿಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಮೊದಲು ತನಿಖೆಯಾಗಲಿ ಎಂದು ಸ್ಪಷ್ಟವಾಗಿ ಹೇಳಿದ್ದೇನೆ ಎಂದರು.

Join Whatsapp
Exit mobile version