ಕೆನಡಾದಲ್ಲಿ ಮುಸ್ಲಿಮ್ ಕುಟುಂಬದ ಮೇಲೆ ಲಾರಿ ಹರಿಸಿ ನಾಲ್ವರ ಹತ್ಯೆ; ಆರೋಪಿ ವಿರುದ್ಧ ಭಯೋತ್ಪಾದನೆ ಪ್ರಕರಣ ದಾಖಲು

Prasthutha|

ಕೆನಡಾ : ಇಸ್ಲಾಮೋಫೋಬಿಯಾದಿಂದ ಉದ್ದೇಶಪೂರ್ವಕವಾಗಿ ಮುಸ್ಲಿಂ ಕುಟುಂಬದ ಐವರು ಸದಸ್ಯರ ಮೇಲೆ ಲಾರಿ ಹರಿಸಿ ಹತ್ಯೆಗೈದ ಕೆನಡಾದ ಪ್ರಜೆಯ ವಿರುದ್ಧ ಕೊಲೆ ಮತ್ತು ಕೊಲೆ ಯತ್ನಗಳ ಜೊತೆಗೆ ಭಯೋತ್ಪಾದನೆ ಪ್ರಕರಣ ದಾಖಲಿಸಲಾಗಿದೆ ಎಂದು ಪ್ರಾಸಿಕ್ಯೂಟರ್ಸ್ ತಿಳಿಸಿದ್ದಾರೆ.

- Advertisement -


ಒಂಟಾರಿಯೊದ ಲಂಡನ್ನ ಹಳೆಯ ಮಸೀದಿಯಿಂದ ಸ್ವಲ್ಪ ದೂರದಲ್ಲಿರುವ ಪಾರ್ಕಿಂಗ್ ಸ್ಥಳದಲ್ಲಿ ಜೂನ್ 6 ರಂದು ಈ ದಾಳಿ ನಡೆದಿದ್ದು, ಆರೋಪಿ ನಥಾನಿಯಲ್ ವೆಲ್ಟ್ಮನ್ (20) ಎಂಬಾತನನ್ನು ಬಂಧಿಸಲಾಗಿತ್ತು.
ಒಂದೇ ಕುಟುಂಬದ ಸದಸ್ಯರಾದ ಸಲ್ಮಾನ್ ಅಫ್ಝಲ್ (46) ಅವರ ಪತ್ನಿ ಮದಿಹಾ(44), ಪುತ್ರಿ ಯುಮ್ನಾ(15) ಮತ್ತು ಸಲ್ಮಾನ್ ಅವರ ತಾಯಿ ತಲ್ಹತ್ (74) ರಸ್ತೆ ದಾಟಲು ಕಾಯುತ್ತಿದ್ದಾಗ ಆರೋಪಿ ನಥಾನಿಯಲ್ ವೇಗವಾಗಿ ಲಾರಿ ಚಲಾಯಿಸಿಕೊಂಡು ಬಂದು ಉದ್ದೇಶಪೂರ್ವಕವಾಗಿ ಅವರ ಮೇಲೆ ಹರಿಸಿದ್ದ. ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದು, ಓರ್ವ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದ.


“ಫೆಡರಲ್ ಮತ್ತು ಪ್ರಾಂತೀಯ ಅಟಾರ್ನಿ ಜನರಲ್ ಭಯೋತ್ಪಾದನೆ ವಿಚಾರಣೆಯನ್ನು ಪ್ರಾರಂಭಿಸಲು ಒಪ್ಪಿಗೆ ನೀಡಿದರು, ಕೊಲೆ ಮತ್ತು ಕೊಲೆ ಯತ್ನಗಳು ಭಯೋತ್ಪಾದನಾ ಚಟುವಟಿಕೆಯಾಗಿವೆ ಎಂದು ಹೇಳಿದರು ಎಂದು ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

- Advertisement -


ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಈ ದಾಳಿಯನ್ನು ಖಂಡಿಸಿದ್ದು, ತಮ್ಮ ಭಾಷಣದಲ್ಲಿ “ಇದು ಆಕಸ್ಮಿಕ ಘಟನೆಯಲ್ಲ, ಉದ್ದೇಶಪೂರ್ವಕ ಹತ್ಯೆ ಎಂದು ಹೇಳಿದ್ದಾರೆ. “ಇದು ದ್ವೇಷ ಪ್ರೇರಿತವಾದ ಭಯೋತ್ಪಾದಕ ದಾಳಿಯಾಗಿದೆ” ಎಂದು ಕೆನಡಾದ ಹೌಸ್ ಆಫ್ ಕಾಮನ್ಸ್ ನಲ್ಲಿ ಮಾಡಿದ ಭಾಷಣದಲ್ಲಿ ಟ್ರೂಡೊ ಹೇಳಿದ್ದರು.

Join Whatsapp