Home ಟಾಪ್ ಸುದ್ದಿಗಳು ಶಿವಮೊಗ್ಗದಲ್ಲಿ ಪರಿಸ್ಥಿತಿ ಉದ್ವಿಗ್ನ: ಅಂತಿಮಯಾತ್ರೆಯ ವೇಳೆ ಕಲ್ಲು ತೂರಾಟ, ಟಯರ್ ಗಳಿಗೆ ಬೆಂಕಿ

ಶಿವಮೊಗ್ಗದಲ್ಲಿ ಪರಿಸ್ಥಿತಿ ಉದ್ವಿಗ್ನ: ಅಂತಿಮಯಾತ್ರೆಯ ವೇಳೆ ಕಲ್ಲು ತೂರಾಟ, ಟಯರ್ ಗಳಿಗೆ ಬೆಂಕಿ

ಶಿವಮೊಗ್ಗ: ಬಜರಂಗ ದಳದ ಕಾರ್ಯಕರ್ತ ಹರ್ಷ ಎಂಬಾತನ ಹತ್ಯೆ ಬಳಿಕ ಶಿವಮೊಗ್ಗದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು ಕಳೆದ ರಾತ್ರಿ ಆರಂಭಗೊಂಡ ಕಲ್ಲು ತೂರಾಟ ಮತ್ತು ಬೆಂಕಿ ಹಚ್ಚುವ ಕೃತ್ಯಗಳು ಸೋಮವಾರ ಬೆಳಗ್ಗೆ ಕೂಡ ಮುಂದುವರಿದಿದೆ.

ಮೃತ ಹರ್ಷನ ಅಂತಿಮ ಯಾತ್ರೆಯ ವೇಳೆ ಮೆರವಣಿಗೆಯಲ್ಲಿದ್ದ ದುಷ್ಕರ್ಮಿಗಳು ಸಿಕ್ಕ ಸಿಕ್ಕಲ್ಲಿ ಕಲ್ಲು ತೂರಿದ್ದಾರೆ. ಟಯರ್ ಗಳಿಗೆ ಬೆಂಕಿ ಹಚ್ಚಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ. ಎನ್ ಟಿ ರಸ್ತೆಯಲ್ಲಿ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿದ್ದು, ಮೆಗ್ಗಾನ್ ಆಸ್ಪತ್ರೆಯಲ್ಲಿ ಮೃತ ಹರ್ಷನ ಮರಣೋತ್ತರ ಪರೀಕ್ಷೆ ಬಳಿಕ ಶವವನ್ನ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಯಿತು.

ಮೆಗ್ಗಾನ್ ಆಸ್ಪತ್ರೆಯಿಂದ ಶಿವಮೊಗ್ಗದ ಬಸವನ ಬೀದಿಯಲ್ಲಿರುವ ಹರ್ಷನ ಮನೆವರೆಗೆ ಮೃತದೇಹ ಮೆರವಣಿಗೆ ಮಾಡಲಾಗುತ್ತಿದ್ದು, ಈ ವೇಳೆ ಕಲ್ಲು ತೂರಾಟ ನಡೆದಿದೆ ಎನ್ನಲಾಗಿದೆ. ಶಿವಮೊಗ್ಗದಲ್ಲಿ ಹಿಂಸಾಚಾರ ತೀವ್ರಗೊಂಡಿದ್ದು ವಾಹನಗಳಿಗೆ ಬೆಂಕಿ ಹಚ್ಚಿ ಅಂಗಡಿಗಳ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ.

ಹರ್ಷ ಕೊಲೆಯಾದ ಬಳಿಕ ನಗರದ ಸೀಗೆಹಟ್ಟಿ, ಕಲ್ಲಪ್ಪನ ಕೇರಿ, ರವಿವರ್ಮ ಬೀದಿ, ಕ್ಲಾರ್ಕ್ ಪೇಟೆ ಒಳಗೊಂಡಂತೆ ಅರ್ಧ ಹಳೇ ಶಿವಮೊಗ್ಗ ಭಾಗ ಬೂದಿಮುಚ್ಚಿದ ಕೆಂಡಂತಾಗಿದೆ. ಓಟಿ ರಸ್ತೆಯಲ್ಲಿ ಅಂತಿಮ ಯಾತ್ರೆ ನಡೆಸುವಾಗ ದುಷ್ಕರ್ಮಿಗಳು ಬೈಕ್ ಗೆ ಬೆಂಕಿ ಹಚ್ಚಿ, ಕಾರುಗಳು ಮತ್ತು ಮನೆಗಳಿಗೆ ಕಲ್ಲು ತೂರಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Join Whatsapp
Exit mobile version